ಬೆಂಗಳೂರು: ವರನಟ ಡಾ.ರಾಜ್‍ಕುಮಾರ್ 92ನೇ ಜನ್ಮದಿನ ಸಂಭ್ರಮಾಚರಣೆಯನ್ನು ರಾಜ್ ಅವರ ಮೂವರು ಮಕ್ಕಳು ಒಂದೊಂದು ರೀತಿಯಾಗಿ ವಿಶೇಷವಾಗಿ ಆಚರಿಸುವ ಮೂಲಕವಾಗಿ ತಂದೆಗೆ ಪ್ರೀತಿಯನ್ನು ತೋರಿಸಿದ್ದಾರೆ.
ರಾಜ್‍ಕುಮಾರ್ ಅವರ 2 ನೇ ಮಗ ರಾಘವೇಂದ್ರ ರಾಜ್ ಕುಮಾರ್ ಬೆಳಗ್ಗೆ 8 ಗಂಟೆಗೆ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಹಿರಿಮಗ ಶಿವರಾಜ್ ಕುಮಾರ್ ಕೂಡ ತಂದೆಯ ಫೋಟೋವನ್ನು ನಿಸರ್ಗದ ಮಡಿಲಿನಲ್ಲಿಟ್ಟು ಹೂಗಳಿಂದ ಅಲಂಕಾರವನ್ನು ಮಾಡಿ ತಂದೆಯ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಯ ಜನ್ಮ ದಿನಾಚರಣೆಗೆಂದು ವಿಶೇಷವಾಗಿ ಹಾಡನ್ನು ಹಾಡಿದ್ದಾರೆ. ತಂದೆಯ ಜೊತೆಗೆ ಕಳೆದ ದಿನಗಳನ್ನು ಮೆಲುಕು ಹಾಕಿ ತಂದೆಯನ್ನು ಪದಗಳ ಮೂಲಕವಾಗಿ ಬಣ್ಣಿಸಿದ್ದಾರೆ. ಈ ವೀಡಿಯೋದಲ್ಲಿ ಪುನೀತ್ ಹಾಡು ಹೇಳುತ್ತಾ ಅಪ್ಪಾಜಿಯನ್ನು ನೆನೆಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಅಪ್ಪಾಜಿ ಹುಟ್ಟುಹಬ್ಬದ ಪ್ರಯುಕ್ತ ನಮ್ಮದೊಂದು ಪುಟ್ಟ ಕಾಣಿಕೆ ಎಂದು ಬರೆದುಕೊಂಡು ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಪುನೀತ್ ಹಂಚಿಕೊಂಡಿದ್ದಾರೆ.
ರಾಜ್ ಕುಮಾರ್ ಅಭಿಮಾನಿಗಳು ಈ ಹಾಡನ್ನು ಮೆಚ್ಚಿ ಗುನುಗಲು ಪ್ರಾರಂಭಿಸಿದ್ದಾರೆ. ರಾಜ್ ಕುಮಾರ್ ಅವರನ್ನು ನೆನೆಪಿಸುವ ಈ ಹಾಡನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.
https://twitter.com/PuneethRajkumar/status/1385767951110873089?ref_src=twsrc%5Etfw%7Ctwcamp%5Etweetembed%7Ctwterm%5E1385767951110873089%7Ctwgr%5E%7Ctwcon%5Es1_c10&ref_url=https%3A%2F%2Fpublictv.in%2Fpuneeth-rajkumar-raghavendra-rajkumar-shivrajkumar-dr-rajkumar-on-his-92nd-birth-anniversary%2F