Breaking News

ಯುಗಾದಿ ‘ಹೊಸತೊಡಕು’ ಆಚರಣೆಗೆ ಭರ್ಜರಿ ಸಿದ್ದತೆ:‌ ಮಾಂಸದಂಗಡಿಗಳ ಮುಂದೆ ಕ್ಯೂ ನಿಂತ ಜನ

Spread the love

ರಾಜ್ಯದ ಜನತೆ ನಿನ್ನೆ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ರು. ಅಂತೆಯೇ ಇವತ್ತೂ ಕೂಡ ಹೊಸತೊಡಕು ಆಚರಿಸೋಕೆ ರೆಡಿಯಾಗಿದ್ದಾರೆ.

ಕಳೆದ ವರ್ಷ ಕೊರೊನಾ ಲಾಕ್‌ ಡೌನ್‌ ನಡುವೆಯೂ ತಮ್ಮ ಎಂದಿನ ಆಚರಣೆಯನ್ನು ಬಿಡದ ಜನ ಹಲವು ನಿರ್ಬಂಧಗಳ ನಡುವೆಯೂ ಮಾರುದ್ದದ ಕ್ಯೂನಲ್ಲಿ ಕಾದು ನಿಂತು ಮಟನ್‌ – ಚಿಕನ್‌ ಖರೀದಿಸಿದ್ದರು.

ಮಟನ್‌ – ಚಿಕನ್‌ ಬೆಲೆ ಗಗನಕ್ಕೇರಿದ್ದರೂ ಹೊಸ ತೊಡಕು ಆಚರಣೆ ಸಂಭ್ರಮವೇನು ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪಾಲು ಹಾಕುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಮಾಂಸದಂಗಡಿಗಳ ಮುಂದೆ ಜನ ನೆರೆದಿದ್ದಾರೆ.

ರಾಜ್ಯದ ಅನೇಕ ಕಡೆಗಳಲ್ಲಿ ಹೊಸತೊಡಕನ್ನು ಆಚರಿಸುತ್ತಿದ್ದು, ಹಬ್ಬಕ್ಕೆ ಚಿಕನ್ – ಮಟನ್ ಮಾಡಲು ಜನರು ಮಾಂಸದಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿರುವುದು ಸಾಮಾನ್ಯವಾಗಿತ್ತು. ಕೆಲವು ಕಡೆ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಹೊರವಲಯದ ಮಾಂಸದಂಗಡಿಗಳಿಗೆ ಜನ ಲಗ್ಗೆ ಇಟ್ಟಿದ್ದಾರೆ. ಹಳ್ಳಿಗಳಲ್ಲಿ ಕೆಲವರು ಸೇರಿಕೊಂಡು ಶಕ್ತ್ಯಾನುಸಾರ ಕುರಿಗಳನ್ನು ಕೊಯ್ದು ಪಾಲು ಹಾಕಿಕೊಂಡಿದ್ದಾರೆನ್ನಲಾಗಿದೆ.


Spread the love

About Laxminews 24x7

Check Also

ನೈಋತ್ಯ ರೈಲ್ವೆಗೆ ಸೆಪ್ಟೆಂಬರ್​ನಲ್ಲಿ ಭರ್ಜರಿ ಆದಾಯ: ಸರಕು ಸಾಗಣೆಯಿಂದ ₹427, ಪ್ರಯಾಣಿಕರಿಂದ ₹282 ಕೋಟಿ ಗಳಿಕೆ

Spread the love ಹುಬ್ಬಳ್ಳಿ: ಸೆ. 2025ರಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ