Breaking News
Home / ಜಿಲ್ಲೆ / ಕೊಪ್ಪಳ / ಕಾಂಗ್ರೆಸ್ ಚಿಲ್ಲರೆ ರಾಜಕಾರಣದ ಬಗ್ಗೆ ಬಿಜೆಪಿ ಬಳಿ ಸಾಕ್ಷಿ ಇದೆಯಾ : ಸಿದ್ದರಾಮಯ್ಯ

ಕಾಂಗ್ರೆಸ್ ಚಿಲ್ಲರೆ ರಾಜಕಾರಣದ ಬಗ್ಗೆ ಬಿಜೆಪಿ ಬಳಿ ಸಾಕ್ಷಿ ಇದೆಯಾ : ಸಿದ್ದರಾಮಯ್ಯ

Spread the love

ಕೊಪ್ಪಳ : ಬೆಳಗಾವಿ, ಮಸ್ಕಿ ಹಾಗೂ ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಕೊಪ್ಪಳ ಜಿಲ್ಲೆ ತಾವರಗೇರಾ ಪಟ್ಟಣದಲ್ಲಿ ಮಾತನಾಡಿ, ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಹೋಗುತ್ತಿದ್ದೇನೆ‌. ಇಂದು 10- 15 ಕಡೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ. ಬೆಳಗಾವಿ ಲೋಕಸಭೆ ಮತ್ತು 2 ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.

ಕಾಂಗ್ರೆಸ್ ಚಿಲ್ಲರೇ ರಾಜಕಾರಣ ಮಾಡುತ್ತಿದೆ ಎಂಬ ಸಚಿವ ಜಗದ್ದೀಶ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಚಿಲ್ಲರೇ ರಾಜಕಾರಣ ಯಾರು ಮಾಡ್ತಾ ಇದ್ದಾರೆ. ಬಿಜೆಪಿಯವರ ಬಳಿ ಈ ಬಗ್ಗೆ ಸಾಕ್ಷಿ ‌ಇದೆಯಾ ? ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬುದಕ್ಕೆ ಈ ಬಗ್ಗೆ ಅವರ‌ ಬಳಿ ಸಾಕ್ಷಿ ಇದೆಯಂತಾ ? ಬಿಜೆಪಿಯವರು ತಮ್ಮ ಮೈ ಮೇಲೆ ಬಂದಾಗ ಸುಳ್ಳು ಹೇಳುತ್ತಾರೆ ಎಂದರು.

ಶಾಸಕ ರಮೇಶ ಜಾರಕಿಹೊಳಿ ಕೋವಿಡ್ ನೆಪದಿಂದ ತನಿಖೆಗೆ ಗೈರು ವಿಚಾರ, ಈ ಬಗ್ಗೆ ನಾನು ಏನೂ ಮಾತನಾಡೊಲ್ಲ ಎಂದ ಅವರು, ಸಿಡಿ ಲೇಡಿ ಪ್ರಕರಣದಲ್ಲಿ ಮಾಜಿ‌ ಸಚಿವ ಡಿ.ಸುಧಾಕರ ಹೆಸರು ಕೇಳಿ ಬಂದಿದೆ. ನನಗೆ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ. ಸಿಡಿ ಪ್ರಕರಣದಲ್ಲಿ ಯಾರೇ ಇದ್ದರೂ ಸಮಗ್ರ ತನಿಖೆಯಾಗಲಿ ಎಂದರು.


Spread the love

About Laxminews 24x7

Check Also

ಕಂಗನಾಗೆ ಮುಂಬೈ ಕೋರ್ಟ್ ಖಡಕ್ ಎಚ್ಚರಿಕೆ: ಹಾಜರಾಗಿಲ್ಲ ಅಂದ್ರೆ ವಾರೆಂಟ್ ಜಾರಿ

Spread the loveಚಿತ್ರಕತೆ ರಚನೆಕಾರ, ಚಿತ್ರಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಕಂಗನಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ