Breaking News

ಸಾರಿಗೆ ನೌಕರರಿಗೆ ಶಿವರಾತ್ರಿ ಸಂಭ್ರಮ! ಅಂತರ್‌ ನಿಗಮಗಳ ವರ್ಗಾವಣೆಗೆ ಅಸ್ತು

Spread the love

ಬೆಂಗಳೂರು: ಶಿವರಾತ್ರಿ ಸಂದರ್ಭದಲ್ಲೇ ರಾಜ್ಯ ಸಾರಿಗೆ ನೌಕರರಿಗೆ ಸರಕಾರ ಸಿಹಿ ಸುದ್ದಿ ನೀಡಿದೆ. ಅಂತರ್‌ ನಿಗಮಗಳ ವರ್ಗಾವಣೆಗೆ ಸರಕಾರ ಬುಧವಾರ ಆದೇಶಿಸಿದ್ದು, ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರಿಂದ ಸುಮಾರು 20-25 ಸಾವಿರ ನೌಕರರಿಗೆ ಅನುಕೂಲ ಆಗಲಿದೆ ಎಂದು ಅಂದಾಜಿಸಲಾಗಿದೆ.

ಮಾತೃಸಂಸ್ಥೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ವೃಂದದ ಖಾಯಂ ನೌಕರರಿಗೆ ನಿಬಂಧನೆಗಳಿಗೆ ಒಳಪಟ್ಟ ಅಂತರ್‌ ನಿಗಮಗಳ ವರ್ಗಾವಣೆ ಭಾಗ್ಯ ಕಲ್ಪಿಸಲಾಗಿದೆ. ಇನ್ನು ಮುಂದೆ ಪ್ರತೀ ವರ್ಷ ಎ.1ರಿಂದ 30ರ ವರೆಗೆ ಈ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ವರ್ಷದಲ್ಲಿ ಒಟ್ಟು ಸಿಬಂದಿ ಪ್ರಮಾಣದ ಶೇ. 2ರಷ್ಟು ಮಂದಿಯ ವರ್ಗಾವಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು, 6ನೇ ವೇತನ ಪರಿಗಣನೆ ಸಹಿತ ಒಂಬತ್ತು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು. ಈ ಪೈಕಿ ಏಳು ಈಡೇರಿದಂತಾಗಿದೆ. 6ನೇ ವೇತನ ಆಯೋಗದ ಶಿಫಾರಸು ಅನ್ವಯಿಸುವುದು ಮತ್ತು ತರಬೇತಿ ಅವಧಿ ಇಳಿಕೆ ಬಾಕಿ ಇವೆ.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ