Breaking News

ವಿಧಾನಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿ

Spread the love

ಬೆಂಗಳೂರು,ಫೆ.27- ವಿಧಾನಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ಡಿ-ದರ್ಜೆ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಡಿ-ದರ್ಜೆಯ ಪುರುಷ ನೌಕರರಿಗೆ ಬಿಳಿ ಬಣ್ಣದ ಡ್ರೆಸ್‍ಡಿ-ದರ್ಜೆಯ ಮಹಿಳಾ ನೌಕರರಿಗೆ ಮೆರೂನ್ ಡ್ರೆಸ್‍ಧರಿಸುವಂತೆ ಸೂಚನೆ ನೀಡಲಾಗಿದೆ.

ಡಿ ದರ್ಜೆಯ ನೌಕರರು ಸೂಚಿಸಿದ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದ್ದು, ಚಾಲಕರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಪರಿಷತ್ ಅೀನ ಕಾರ್ಯದರ್ಶಿ ಎಸ್.ಜಯಂತಿ ಡ್ರೆಸ್ ಕೋಡ್ ಸುತ್ತೋಲೆ ಹೊರಡಿಸಿದ್ದಾರೆ.ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾರಿ, ನೌಕರರುಗಳಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಮಾರ್ಚ್ 1ರಿಂದ ಬಯೋಮೆಟ್ರಿಕ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಮಾಡಬೇಕು. ಮಾರ್ಚ್ 15ರಿಂದ ಜಾರಿಗೆ ಬರುವಂತೆ ಡಿ ಗುಂಪು ನೌಕರರು ಕಡ್ಡಾಯವಾಗಿ ಪುರುಷರು ಬಿಳಿ ಬಣ್ಣ ಮತ್ತು ಮಹಿಳೆಯರು ಮೆರೂನ್ ಬಣ್ಣದ ಸಮವಸ್ತ್ರವನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು.


Spread the love

About Laxminews 24x7

Check Also

ಆರೋಪಿಗಳನ್ನು ಕರೆತರುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಸಾವು

Spread the loveಬೆಂಗಳೂರು: ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಿ ಕರೆತರುವಾಗ‌ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಲಘಟ್ಟಪುರ ಠಾಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ