ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಕೊಟ್ಟಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಈಗ ಅಂತ್ಯಗೊಂಡಿದೆ.
ಪ್ರಸ್ತುತ ದರ್ಶನ್ ತಮ್ಮ ಮುಂಬರುವ ಚಿತ್ರ ‘ರಾಬರ್ಟ್’ ಪ್ರಮೋಟ್ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಶಾಸಕ ಜಮೀರ್ ಅಹ್ಮದ್ ಮನೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ.
ಯಾವ ಕಾರಣಕ್ಕೆ ಜಮೀರ್ ಅಹ್ಮದ್ ಮನೆಗೆ ಚಾಲೆಂಜಿಂಗ್ ಸ್ಟಾರ್ ಭೇಟಿ ನೀಡಿದ್ದರು ಎಂಬುದು ಬಹಿರಂಗವಾಗಿಲ್ಲ. ಆದರೆ ಜಮೀರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಭೇಟಿ ಕುತೂಹಲ ಕೆರಳಿಸಿದೆ. ಜಮೀರ್ ಜೊತೆಗೆ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿದ ದರ್ಶನ್, ಅವರೊಂದಿಗೆ ತೆಗೆಸಿಕೊಂಡ ಫೋಟೋ ಒಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ತಮ್ಮ ಖಾತೆಯ ಮೂಲಕ ದರ್ಶನ್ ಭೇಟಿಯ ಫೋಟೋಗಳನ್ನು ಜಮೀರ್ ಶೇರ್ ಮಾಡಿಕೊಂಡಿದ್ದಾರೆ.
ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ತಮ್ಮ ‘ಬನಾರಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ʼರಾಬರ್ಟ್ʼ ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ಮಾರ್ಚ್ 11ರಂದು ಏಕಕಾಲದಲ್ಲಿ ಬಿಡುಗಡೆ ಕಾಣಲಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದರ್ಶನ್ ತೂಗುದೀಪ್ ಅವರು ಇಂದು ನನ್ನ ನಿವಾಸಕ್ಕೆ ಆಗಮಿಸಿದ ಕ್ಷಣಗಳು. pic.twitter.com/68xjBgbVAA
— B Z Zameer Ahmed Khan (@BZZameerAhmedK) February 24, 2021
Laxmi News 24×7