Breaking News

ಒಡಿಶಾದಲ್ಲಿ 45 ಕೆ.ಜಿ. ಆನೆ ದಂತ ವಶ, ಇಬ್ಬರ ಬಂಧನ

Spread the love

ಬಾರಿಪಾದ (ಒಡಿಶಾ), ಫೆ.25 (ಪಿಟಿಐ)- ರಾಜ್ಯದ ಮಯೂರ್‍ಭಾನ್ಜ ಜಿಲ್ಲೆಯಲ್ಲಿ 45 ಕಿಲೋ ಗ್ರಾಂ ತೂಕವುಳ್ಳ ಎಂಟು ಆನೆ ದಂತಗಳನ್ನು ವಶಪಡಿಸಿಕೊಂಡು, ಇದಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಸಲಾಗಿದೆ ಎಂದು ಒಡಿಶಾ ಅರಣ್ಯ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಉದಾಲಾ ವಲಯದ ಅರಣ್ಯ ಸಿಬ್ಬಂದಿ ಸಿಮಿಲ್ಪಾಲ್ ರಾಷ್ಟ್ರೀಯ ಉದ್ಯಾನವನ ತಪ್ಪಲಿನ ಅಂಗರ್ಪಾದ ಗ್ರಾಮಕ್ಕೆ ಭೇಟಿ ನೀಡಿ, ಆನೆ ದಂತ ಖರೀದಿದಾರರಂತೆ ನಟಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಂತಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಸಲಾಗಿದೆ.

ನಮ್ಮ ಪೂರ್ವ ನಿರ್ಧರಿತ ಯೋಜನೆಗೆ ಬಲೆ ಬಿದ್ದ ಖದೀಮರು ನಮ್ಮ ನಡುವೆ ವ್ಯವಹಾರಕ್ಕಿಳಿದರು. ಆಗ 18 ಲಕ್ಷ ರೂ.ಗಳಿಗೆ ವ್ಯವಹಾರ ಕುದುರಿಸಿ ಎಂಟು ಆನೆ ದಂತಗಳನ್ನು ಪಡೆದುಕೊಂಡೆವು ಎಂದು ಅಕಾರಿಗಳು ಹೇಳಿದ್ದಾರೆ. ಆ ಸ್ಥಳದಲ್ಲಿದ್ದ ಎಲ್ಲ ಆನೆ ದಂತಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಡ್ರಂಕ್​​ & ಡ್ರೈವ್:​ 36 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು

Spread the love ಬೆಂಗಳೂರು: ಮದ್ಯ ಸೇವಿಸಿ ಶಾಲಾ ವಾಹನಗಳನ್ನು ಓಡಿಸುವ​ ಚಾಲಕರ ವಿರುದ್ಧ ನಗರ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ