Breaking News

ಮೋದಿʼ ಸ್ಟೇಡಿಯಂ ಪೆವಿಲಿಯನ್​ಗೆ ಅದಾನಿ, ಅಂಬಾನಿ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ

Spread the love

ಗುಜರಾತ್​ನಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನರೇಂದ್ರ ಮೋದಿ ಸ್ಟೇಡಿಯಂನ್ನು ಉದ್ಘಾಟನೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದದ ಅಲೆಯೇ ಹುಟ್ಟಿಕೊಂಡಿದೆ. ಸರ್ದಾರ್​ ವಲ್ಲಭಬಾಯ್​ ಪಟೇಲ್​ರ ಹೆಸರಲ್ಲಿದ್ದ ಈ ಸ್ಟೇಡಿಯಂಗೆ ಮರುನಾಮಕರಣದ ಅಗತ್ಯವಿತ್ತೇ ಎಂದು ವಿಪಕ್ಷಗಳು ಕೆಂಡ ಕಾರ್ತಿವೆ .

ಈ ವಿವಾದ ಇನ್ನೂ ಸುದ್ದಿಯಲ್ಲಿ ಇರುವಾಗಲೇ ಇದೀಗ ಅದಾನಿ ಹಾಗೂ ಅಂಬಾನಿ ಹೆಸರು ಕೂಡ ಈ ಮೈದಾನದ ವಿವಾದದ ಜೊತೆ ಥಳುಕು ಹಾಕಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ಮೋದಿ ಸ್ಟೇಡಿಯಂನಲ್ಲಿರುವ ಎರಡು ಪೆವಿಲಿಯನ್​ಗಳಿಗೆ ರಿಲಯನ್ಸ್​ ಎಂಡ್​ ಹಾಗೂ ಅದಾನಿ ಎಂಡ್​ ಎಂದು ಹೆಸರಿಡಲಾಗಿದೆ.

ಆದರೆ ಈ ರೀತಿ ಪೆವಿಲಿಯನ್​ಗಳಿಗೆ ಅಂಬಾನಿ ಹಾಗೂ ಅದಾನಿಗೆ ಸಂಬಂಧಿಸಿದ ಹೆಸರನ್ನ ಇಡೋಕೆ ಮುಖ್ಯವಾದ ಕಾರಣವಿದೆ. ಈ ಎರಡೂ ಕಂಪನಿಗಳು ವಿಶ್ವದ ಅತಿದೊಡ್ಡ ಕ್ರಿಕೆಟ್​ ಮೈದಾನ ನಿರ್ಮಾಣಕ್ಕೆ ದೇಣಿಗೆ ನೀಡಿವೆ ಎನ್ನಲಾಗಿದೆ. ದೇಣಿಗೆಯ ಜೊತೆಗೆ ಈ ಎರಡೂ ಕಂಪನಿಗಳು ತಲಾ ಒಂದು ಕಾರ್ಪೋರೇಟ್​ ಬಾಕ್ಸ್​ಗಳನ್ನ ಖರೀದಿ ಮಾಡಿವೆ. ಇದರ ವೆಚ್ಚ 25 ವರ್ಷಗಳ ಅವಧಿಗೆ 250 ಕೋಟಿ ರೂಪಾಯಿ ಆಗಿದೆ. ಈ ರೀತಿ ದಾನಿಗಳ ಹೆಸರನ್ನ ಹಾಕೋದು ಒಪ್ಪಂದದಲ್ಲಿ ಇದ್ದ ಕಾರಣ ರಿಲಯನ್ಸ್ ಹಾಗೂ ಅದಾನಿ ಹೆಸರನ್ನ ಪೆವಿಲಿಯನ್​ಗೆ ಇಡಲಾಗಿದೆ.

ಪೆವಿಲಿಯನ್​ಗೆ ಅದಾನಿ ಎಂದು ನಾಮಕರಣ ಮಾಡಿದ್ದು ಇದೇ ಮೊದಲನೇನಲ್ಲ. ಕಾಂಗ್ರೆಸ್​ ಅಧಿಕಾರಾವಧಿಯಲ್ಲಿ ಚಿಮನ್​ಭಾಯ್​ ಪಟೇಲ್​ ಸರ್ಕಾರವಿದ್ದಾಗ ಅದಾನಿ ಹೆಸರನ್ನ ಪೆವಿಲಿಯನ್​ಗೆ ಇಡಲಾಗಿತ್ತು. ಆದರೆ ಅಂಬಾನಿ ಹೊಸ ದಾನಿಯಾಗಿರೋದ್ರಿಂದ ಈಗ ಇನ್ನೊಂದು ಎಂಡ್​ಗೆ ರಿಲಯನ್ಸ್ ಹೆಸರನ್ನ ಇಡಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 76 ಕಾರ್ಪೋರೇಟ್​ ಬಾಕ್ಸ್​ಗಳಿದ್ದು ಇದನ್ನ ಕೊಂಡುಕೊಳ್ಳಬಲ್ಲ ಉದ್ಯಮಿಗಾಗಿ ಹುಡುಕಾಟ ನಡೆಯುತ್ತಿದೆ.


Spread the love

About Laxminews 24x7

Check Also

ಸ್ವಲ್ಪ ಮಾತನಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತಾಡಿ,:H.D.K.

Spread the loveಬೆಂಗಳೂರು: ಸ್ವಲ ಮಾತಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತನಾಡಿ. ನನ್ನ ಬಗ್ಗೆ ನನ್ನ ಪಕ್ಷದ ಬಗ್ಗೆ ಚರ್ಚೆ ಮಾಡುವುದಕ್ಕೆ ನೀವು ಯಾರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ