ಮೈಸೂರು : ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು, ಇದೇ ವೇಳೆ ಅವರು ಮಾತನಾಡಿ, ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಒಂದು ವೇಳೇ ತಿನ್ನಬೇಕು ಅಂತ ಅನ್ನಿಸಿದರೇ ತಿನ್ನುವೇ, ಆಹಾರ ಪದ್ದತಿ ನನ್ನ ಹಕ್ಕು, ಅದನ್ನು ಯಾರು ಕೂಡ ಪ್ರಶ್ನೆ ಮಾಡುವಂತಿಲ್ಲ ಅಂತ ನೇರವಾಗಿ ತಮ್ಮ ವಿರೋಧಿಗಳಿಗೆ ಹೇಳಿದರು.
ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ,ನಾನು ತಿಂದಿರುವುದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ನಾನು ಯಾರಿಗೂ ಇದನ್ನು ತಿನ್ನಿ, ಇದನ್ನು ತಿನ್ನಬೇಡಿ ಅಂತ ಹೇಳಿಲ್ಲ, ನನಗೆ ಬೇಕಾಗಿರೋದನ್ನು ನಾನು ತಿನ್ನುವ ಹಕ್ಕು ನನಗೆ ಇದೇ ಅಂತ ಅವರು ಹೇಳಿದರು.
Laxmi News 24×7