ಬೆಂಗಳೂರು: “ಬಳ್ಳಾರಿ ಗಲಭೆ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ಹೇಳಿದ್ದೇನೆ. ಯಾರ ಗನ್ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ?. ಬಿಜೆಪಿಯವರ ಗನ್ನಿಂದಲೋ ಅಥವಾ ಕಾಂಗ್ರೆಸ್‌ನವರ ಗನ್ನಿಂದ ಬಂದಿದ್ಯಾ ಎನ್ನುವುದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಖಾಸಗಿ ಬುಲೆಟ್ ಎಂದು ಎಸ್ಪಿ ಮಾಹಿತಿ ನೀಡಿರುವ ವಿಚಾರಕ್ಕೆ, “ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ನಲ್ಲಿ ಗನ್ ಫೈರ್ ಮಾಡಿದ್ದಾರೆ. ಫೈರ್ ಮಾಡಿರೋದು ಮನುಷ್ಯನಿಗೆ ತಗುಲಿದೆ. ರಾಜಶೇಖರ್ ಎಂಬವರು ಸತ್ತು ಹೋಗಿದ್ದಾರೆ” ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, “ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆಗಿದೆ. ಫೈರಿಂಗ್ನಲ್ಲಿ ನಮ್ಮ ಕಾರ್ಯಕರ್ತನ ಪ್ರಾಣ ಹೋಗಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಆಗುತ್ತದೆ. ರಾತ್ರಿ ಒಂದು ಗಂಟೆಗೆ ಪರಿಸ್ಥಿತಿ ತಹಬದಿಗೆ ಬಂದಿದೆ” ಎಂದು ತಿಳಿಸಿದರು.
Laxmi News 24×7