ಬಿಪಿಎಲ್ ಕಾಡ್೯ ರದ್ದು ಪ್ರಕರಣದಲ್ಲಿ ಗೊಂದಲ: ಬಡವರಿಗೆ ತೊಂದರೆ ಎಂದುರಾಜ್ಯಾಧ್ಯಕ್ಷ ತಳವಾರ ಆರೋಪ |
ಅನರ್ಹ ಬಿಪಿಎಲ್ ಕಾಡ್೯ ಮಾಡಿರುವ ಆಹಾರ ಇಲಾಖೆಯ ನಾಮಫಲಕದಲ್ಲಿ ಸಾಕಷ್ಟು ಗೊಂದಲ ಇದೆ ಎಂದು
ನ್ಯಾಯಬೆಲೆ ಪಡಿತರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ತಳವಾರ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮತನಾಡಿದರು. ಆರ್ ಟಿ ರಿಟನ್೯ ಮಾಡಿದವರನ್ನು ಬಿಪಿಎಲ್ ಕಾಡ್೯ ರದ್ದು ಮಾಡಿರುವುದು ತೊಂದರೆ ಅನುಭವಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳ ಬಿಪಿಎಲ್ ಕಾಡ್೯ ರದ್ದು ಮಾಡುವುದು ಸರಿಯಲ್ಲ ಎಂದರು.
ಬಿಪಿಎಲ್ ಕಾಡ್೯ ಐಟಿ ರಿಟನ್ ಮಾಡದವರನ್ನು ರದ್ದು ಮಾಡಿ ವಿನಾಕಾರಣ ಬಡವರು, ದಲಿತರು, ಹಿಂದುಳಿದವರಿಗೆ ತೊಂದರೆಯಾಗುತ್ತದೆ.
ಆಹಾರ ಇಲಾಖೆಯವರು ಮಾರ್ಗಸೂಚಿ ಪ್ರಕಾರ ನ್ಯಾಯ ಸಮ್ಮತವಾಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.