ವಿಜಯಪುರ ಸೇರಿದಂತೆ ಬಾಗಲಕೊಟೆಯಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು ಇದೀಗ ಭಾರೀ ಮಳೆಗೆ ಬಾಗಲಕೊಟೆಯಲ್ಲಿ ಮನೆ ಕುಸಿದು ಬಿದ್ದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಇಲಕಲ್ ತಾಲ್ಲೂಕಿನ ಗೊನಾಳ ಎಸ್ ಟಿ ಗ್ರಾಮದಲ್ಲಿ. ಯಂಕಣ್ಣ, ಹಾಗೂ ಬಾಗವ್ವ ಮಾದರ
ಅವರ ಮನೆ ಸೇರಿದಂತೆ ಮೂರು ಮನೆಗಳ ಮೆಲ್ಚಾವಣಿ ಕುಸಿದಿದೆ. ಅದೃಷ್ಟವಶಾತ್ ಮುಂಚಿತವಾಗಿ ಪರಿಣಾಮ ಅರಿತದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನೂ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು.
ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತಗಳು ಮುಂಜಾಗೃತ ಕ್ರಮವಹಿದ್ದು. ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತಿಳಿಸಿದ್ದಾರೆ