ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚಿಂತನೆ – ಮರಾಠಾ ಜಾತಿ ಗಣತಿ ಕುರಿತು ವಿಠ್ಠಲ್ ಹಲಗೇಕರ್ ಅಭಿಪ್ರಾಯ |
ಡಿಸಿಸಿ ಬ್ಯಾಂಕ್ ಸ್ಪರ್ಧೆ ಮಾಡುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ.
ಇನ್ನೂ ಸಮಯ ಇದೆ ಎಂದು ಖಾನಾಪುರ ಶಾಸಕ ವಿಠ್ಠಲ್ ಹಲಗೇಕರ್ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ಸ್ಪರ್ಧೆ ನಡೆಸುವ ವಿಚಾರ ಚಿಂತನೆ ನಡೆದಿದೆ. ಆದಷ್ಟು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಮರಾಠಾ ಸಮಾಜ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿ ಗಣತಿಯ ಕಾಲಂನಲ್ಲಿ ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಮರಾಠಾ ಉಪಜಾತಿಯಲ್ಲಿ ಕುಣಬಿ ಎಂದು ಬರೆಸಬೇಕು ಎಂದರು.
ಜಾತಿ ಗಣತಿ ಸಮೀಕ್ಷೆಯಿಂದ ಯಾರೂ ದೂರ ಉಳಿಯಬಾರದು. ಮಾತೃಭಾಷೆ ಇದ್ದಲ್ಲಿ ಕೆಲವರು ಮರಾಠಿ ಹಾಗೂ ಕನ್ನಡ ಎಂದಲ್ಲೂ ಬರೆಸಬಹುದು.
ಯಾವ ಭಾಗದಲ್ಲಿ ಭಾಷೆ ಬಳಸುತ್ತಾರೆಯೋ ಆ ಭಾಷೆಯನ್ನು ನಮೂದಿಸಬೇಕು ಎಂದರು.