ವಿಜಯಪುರ…:ವಿಜಯಪುರ ಜಿಲ್ಲೆಯಲ್ಲಿ ಮೀನುಮರಿ ಸಾಕಾಣಿಕೆ:13 ಜಿಲ್ಲೆಗೊಂದು ಮೀನುಮರಿ ಸಾಕಾಣಿಕೆ ಕೇಂದ್ರಕ್ಕೆ ಸಿಬ್ಬಂದಿ ಕೊರತೆ
ಅಖಂಡ ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿಯುತ್ತಿದ್ದು, ಜಿಲ್ಲೆಗೆ ಹೊಂದಿಕೊಂಡೆ ಆಲಮಟ್ಟಿ ಹಾಗೂ ನಾರಾಯಣಪುರ ಈ ಎರಡು ಜಲಾಶಯಗಳು ಸಹ ಇರುವುದರಿಂದ ಮೀನುಗಾರಿಕೆಗೆ ಉತ್ತಮ ತಾಣವಾಗಿತ್ತು. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲೂ ಸಹ ಒಳನಾಡು ಮೀನುಗಾರಿಗೆ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ವಿಜಯಪುರ ಜಿಲ್ಲೆ ಸೇರಿದಂತೆ 13 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಆದರೆ ಈ ಕೇಂದ್ರದಲ್ಲೀಗ ಸಿಬ್ಬಂದಿ ಕೊರತೆ ಉಂಟಾಗಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
.. : ಈ ಬಾರಿಯ ಬರ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ರೆ, ಮತ್ತೊಂದೆಡೆ ಕೂಲಿ ಕಾರ್ಮಿಕರನ್ನು ಕಂಗಾಲಾಗಿಸಿದೆ. ಜಿಲ್ಲೆಯಾದ್ಯಂತ ಇರುವ ನದಿಗಳು ಹಾಗೂ ಕೆರೆಗಳು ಸೇರಿ ಅನೇಕ ರೈತರು ಕೃಷಿಹೊಂಡ ನಿರ್ಮಿಸಿಕೊಂಡು ಉಪಕೃಷಿ ಎನಿಸಿಕೊಂಡಿರುವ ಮೀನು ಉತ್ಪಾದನೆಯ ಕೃಷಿ ಮಾಡುತ್ತಿದ್ದಾರೆ. ಮತ್ಯೋದ್ಯಮದಿಂದಲೇ ಸಾಕಷ್ಟು ರೈತರು ಜೀವನ ನಡೆಸುತ್ತಿದ್ದಾರೆ. ವಿಜಯಪುರ ನಗರದ ಹೊರ ಭಾಗದ ಭೂತನಾಳ ಕೆರಯ ಬಳಿಯ ಮೀನು ಸಾಕಾಣಿಕೆ ಕೇಂದ್ರಕ್ಕೆ ಹೆಚ್ಚಿನ ರೈತರು ಆಗಮಿಸುವ ಮೂಲಕ ಮೀನು ಖರೀದಿಗೆ ಮುಂದಾಗಿದ್ದಾರೆ…..
: ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಉತ್ತೇಜನ ನೀಡುವ ಉದ್ದೇಶದಿಂದ ಬೀದರ್ ದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ 2010ರಲ್ಲಿ ವಿಜಯಪುರದಲ್ಲಿ ಮೀನುಗಾರಿಕೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ತೆರೆಯಲಾಗಿದೆ. ಆದ್ರೆ ಈ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಹೊರಗುತ್ತಿಗೆ ಮೇಲೆ ಕೆಲ ಸಿಬ್ಬಂದಿ ನೇಮಕ ಮಾಡಿ ಮೀನುಮರಿ ಸಾಕಾಣಿಕೆ ಹಾಗೂ ರೈತರಿಗೆ ವಿತರಿಸುವ ಕೆಲಸ ಮಾಡ್ತಿದೆ. ಸರ್ಕಾರ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ಜೊತೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಅನ್ನೋದು ರೈತರ ಆಗ್ರಹವಾಗಿದೆ. ಇನ್ನು ಮೀನು ಮರಿ ರೈತರಿಗೆ ವಿತರಿಸುವಲ್ಲಿ ಮೀನು ಮರಿ ಲೆಕ್ಕ ಹಾಕಲು ಹಳೆ ಪದ್ಧತಿಯಿದ್ದು, ಸದ್ಯ ಅಧಿಕಾರಿಗಳು ತಂತ್ರಜ್ಞಾನ ಬಳಸಿ ಮೀನು ಮರಿ ಲೆಕ್ಕ ಹಾಕಲು ಯೋಜನೆ ರೂಪಿಸಿದ್ದಾರೆ. ವಿಜಯಪುರ ಜಿಲ್ಲೆ ಬರದನಾಡಾಗಿತ್ತು
ಆಲಮಟ್ಟಿ ಅಣೆಕಟ್ಟೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಕಾರ್ಯಗಳಾದ ಬಳಿಕ ರೈತರು ಜಮೀನಿನಲ್ಲಿ ಕೃಷಿ ಹೊಂಡ,ಬಾವಿ ಸೇರಿದಂತೆ ಹಲವು ನೀರಿನ ಮೂಲಗಳಿವೆ ರೈತರಿಗೆ ಕೃಷಿ ಜೊತೆಗೆ ಮೀನುಗಾರಿಕೆ ಮಾಡುವ ಮೂಲಕ ಆದಾಯ ಗಳಿಸಬಹುದು ಎಂದು ಭೂತನಾಳ ಬಳಿ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಿಂದ ರೈತರಿಗೆ ಜಾಗೃತಿ ಮೂಡಿಸಿ ಪ್ರತಿ ವರ್ಷ ಲಕ್ಷಾಂತರ ಮೀನು ಮರಿ ವಿತರಿಸುವ ಜೊತೆಗೆ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಜೊತೆಗೆ ವಿಜಯಪುರದ ಮೀನುಗಾರಿಕೆ
ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಹೊಸ ಮೀನು ತಳಿ ಅಭಿವೃದ್ಧಿಪಡಿಸಲಾಗಿದೆ. ರೈತರು ವಿವಿಧ ತಳಿಯ ಮೀನುಗಳನ್ನು ತೆಗೆದುಕೊಂಡು ಹೋಗ್ತಿದ್ದು ಪ್ರತಿ ಮೀನಿಗೆ ರೂಪಾಯಿ 1ರಂತೆ ರೈತರಿಗೆ ವಿತರಿಸುತ್ತಿದ್ದಾರೆ. 2010 ರಿಂದ ಈವರೆಗೆ 2ಕೋಟಿ ಮೀನು ಮರಿ ರೈತರಿಗೆ ವಿತರಿಸಿದ್ದು ಈ ವರ್ಷ 4ಲಕ್ಷ ಮೀನು ಮರಿ ರೈತರಿಗೆ ವಿತರಿಸುವ ಗುರಿ
.. : ಪ್ರಧಾನಮಂತ್ರಿ ಮತ್ಸ್ಯ ಸಂಪದ, ಪ್ರಧಾನಮಂತ್ರಿ ಮತ್ಸ್ಯ ಕೃಷಿ ಸಿಂಚಾಯಿ ಯೋಜನೆ ಜೊತೆಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ರೈತರು ಮೀನುಗಾರಿಕೆ ಮಾಡಲು ಹೆಚ್ಚು ಒಲವು ಹೊಂದಿದ್ದಾರೆ. ಇದೊಂದು ರೈತರಿಗೆ ಮಾದರಿ ಕೇಂದ್ರವಾಗಿ ಮಾರ್ಪಟ್ಟಿದೆ…