Breaking News

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ

Spread the love

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ ಒಡೆಯೋ ಕೆಲಸ ನಿರಂತರವಾಗಿ ನಡೆದಿದೆ ಬಸವಣ್ಣ ಹೆಸರು ಬಳಸಿಕೊಂಡು, ಮನಬಂದಂತೆ ಮಾತನಾಡುತ್ತಿದ್ದಾರೆ. ಬಸವೇಶ್ವರ ವಿಚಾರಧಾರೆಗಳನ್ನು ಬಿತ್ತುವುದಾಗಿರಬೇಕಿತ್ತು‌
ಆದರೆ ಅಲ್ಲಿ ಬಸವಣ್ಣ ಆಚಾರ-ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮೊದಲು ಬಸವಣ್ಣನವರ ತತ್ವದಂತೆ ನಡೆದುಕೊಳ್ಳಿ ಎಂದು ಶಿರಹಟ್ಟಿ ಫಕೀರೇಶ್ವರ ಮಠದ
ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ‌ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವೇದಿಕೆ ಮೇಲೆ ಎಸ್.ಸಿ, 2 ಎ ಸಮುದಾಯಕ್ಕೆ ಸೇರಿದ ಸ್ವಾಮೀಜಿಗಳಿದ್ದಾರೆ.
ಅವರು ತಮ್ಮ ತಮ್ಮ ಸಮಾಜವನ್ನು ಬಿಟ್ಟು ಲಿಂಗಾಯತ ಧರ್ಮ‌ ಅಂತ ಬರೆಸುತ್ತಾರಾ? ಅವರ ಮಠಗಳಲ್ಲಿ ವೈದಿಕ ಪರಂಪರೆಯ ಪಾಠ ಶಾಲಾ ನಡೆಸುತ್ತಾರೆ. ಆದರೆ ಭಾಷಣದಲ್ಲಿ ವೈದಿಕ ಪರಂಪರೆಯ ವಿರುದ್ಧ ಮಾತನಾಡ್ತಾರೆ. ಬಸವಣ್ಣನವರ ಹೆಸರಲ್ಲಿ ಸಮಾಜ ಹೊಡೆಯುವ ಕೆಲಸ‌ ಮಾಡುತ್ತಿದ್ದಾರೆ ಎಂದು
ತೋಂಟದಾರ್ಯ ಸ್ವಾಮೀಜಿ ವಿರುದ್ಧ ಕಿಡಿ ಕಾರಿದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭವಾಯ್ತು
ಈಗಲೂ ಕಾಂಗ್ರೆಸ್ ಸರ್ಕಾರ ಇದೆ.‌
ಈಗ ಮತ್ತೆ ಪ್ರತ್ಯೇಕ ಧರ್ಮ ಹೋರಾಟ ಆರಂಭಗೊಂಡಿದೆ.
ಹೆಸರಿಗೆ ಬಸವ ಸಂಸ್ಕೃತಿ ಯಾತ್ರೆ
ವೇದಿಕೆ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತ್ರ ಮಾಡ್ತಾರೆ.
ವೀರಶೈವ ಲಿಂಗಾಯತ ಮಹಾಸಭಾ ಅಡಿಯಲ್ಲಿ ಸೆಪ್ಟೆಂಬರ್ 11 ರಂದು
ಮಹಾ ಸಭಾ ಪದಾಧಿಕಾರಿಗಳ‌ ಜೊತೆ ಮಠಾಧಿಪತಿಗಳ ಸಭೆ
ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭೆಯ ಕಚೇರಿಯಲ್ಲಿ ಸಭೆ ನಡೆಯಲಿದೆ.
ಜಾತಿ ಗಣತಿ ವಿಚಾರವಾಗಿ ಸಮಾಜದ ಬಗ್ಗೆ ಸಭೆ
ಸೆಪ್ಟೆಂಬರ್ 19 ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ
ಹುಬ್ಬಳ್ಳಿ ಯ ನೆಹರು ಮೈದಾನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ವೀರಶೈವ ಲಿಂಗಾಯತ ಅನ್ನೋ ಹೋರಾಟಕ್ಕೆ ಪಂಚಪೀಠಾದೀಶ್ವರರು ಬೆಂಬಲ ಸೂಚಿಸಿದ್ದಾರೆ. ನೆಹರೂ ಮೈದಾನದಲ್ಲಿ ನಮ್ಮ ಶಕ್ತಿಯನ್ನ ತೋರಿಸುತ್ತೇವೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ
ವಿರೂಪಾಕ್ಷ ಮಹಾಸ್ವಾಮಿಗಳು
ಮೂರುಸಾವಿರ ವಿರಕ್ತ ಮಠ. ಉಪ್ಪಿನಬೆಟಗೇರಿ. ಬಸವಣ್ಣ ಅಜ್ಜನವರು ಕಲ್ಯಾಣಪುರ ಮಠ ಕುಂದಗೋಳ. ಷ ಬ್ರ ಮಹೇಶ್ವರ ಶಿವಾಚಾರ್ಯರು ಜಡೆ ಮಠ ಮೊರಬ. ಷ ಬ್ರ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಿರಕೋಳ ಸೇರದಂತೆ ಪ್ರಮುಖ ಧರ್ಮಗುರುಗಳು

Spread the love

About Laxminews 24x7

Check Also

ಪ್ರೀತಿಸಿ ಸರಳ ವಿವಾಹ, ನೇತ್ರದಾನಕ್ಕೂ ಸಹಿ ಹಾಕಿದ ನವಜೋಡಿ

Spread the loveಮೈಸೂರು: ಸುಮಾರು ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಒಂದಾಗಿದ್ದ ನಗರದ ನಿವಾಸಿ ಚಂದನ್ ಮತ್ತು ಲಾವಣ್ಯ ಅವರ ಸರಳ ಮದುವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ