ಮುಧೋಳ ತಾಲ್ಲೂಕಿನ ಪ್ರವಾಹ ಬಾದಿತ ಜಮೀನುಗಳಿಗೆ ಸಚಿವ ತಿಮ್ಮಾಪೂರ ಭೇಟಿ; ಪರಿಹಾರ ಭರವಸೆ!!
ನಿರಂತರ ಮಳೆಯಿಂದ ರೈತರು ಬೆಳದ ಬೆಳೆ ನಾಶ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ
ಪ್ರವಾಹ ಬಾದಿತ ಜಮೀನುಗಳಿಗೆ ಸಚಿವ ತಿಮ್ಮಾಪೂರ ಭೇಟಿಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ
ನಿರಂತರ ಮಳೆಯಿಂದಾಗಿ ರೈತರು ಬೆಳದ ಬೆಳೆ ಪ್ರವಾಹದ ತುತ್ತಾಗಿದ್ದು. ಪ್ರವಾಹ ಬಾದಿತ ಜಮೀನುಗಳಿಗೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಜೀರಗಾಳ, ಚಿಚಖಂಡಿ ಕೆಡಿ, ಚಿಚಖಂಡಿ ಬಿಕೆ ಗ್ರಾಮಗಳ ಜಮೀನುಗಳಿಗೆ ಸಚಿವ ಆರ್.ಬಿ.ತಿಮ್ಮಾಪುರ ಬೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಬೆಳೆಗಳ ವೀಕ್ಷಣೆ ಮಾಡಿ, ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿ ಕಂದಾಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.