Breaking News

SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

Spread the love

ಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ ಕೇಳಿ ಗುಂಡಿ ತೋಡಿದ್ದ ಎಸ್​​ಐಟಿ ಅಧಿಕಾರಿಗಳಿಗೂ ಪಿತ್ತ ನೆತ್ತಿಗೇರಿತ್ತು. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ನೀಡಿದ್ದರು. ಜಯಂತ್​.ಟಿ ನೋಡಿದರೆ ನಾನು ಕೊಟ್ಟಿರೋದು ಅಲ್ಲ, ಗಿರೀಶ್ ಮಟ್ಟಣ್ಣನವರ್ (Girish Mattannavar)​​ ಬುರುಡೆ ಕೊಟ್ಟಿರೋದು ಅಂತಾ ಆರೋಪಿಸಿದ್ದರು. ಮೊನ್ನೆ ಗಿರೀಶ್​ ಮಣ್ಣನವರ್​​ನ ವಿಚಾರಣೆ ಮಾಡಿದರೆ ನನಗೇನೂ ಗೊತ್ತಿಲ್ಲ ಅಂದಿದ್ದರು. ಇದೀಗ ಸತತ ನಾಲ್ಕೈದು ದಿನಗಳ ಕಾಲ ವಿಚಾರಣೆ ನಡೆಸಿ ಬೆಂಡೆತ್ತಿದಾಗ, ಸೌಜನ್ಯ ಮಾವ ವಿಠ್ಠಲ್​ ಗೌಡರ ಹೆಸರು ಮುನ್ನೆಲೆಗೆ ಬಂದಿದೆ.

ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್​ಐಟಿಯೇ ಶಾಕ್!

ಧರ್ಮಸ್ಥಳ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್​ಐಟಿಗೆ ಬುರುಡೆ ಕಥೆ ಹಿಂದಿನ ಸ್ಫೋಟಕ ಮಾಹಿತಿಗಳೇ ಸಿಗುತ್ತಿವೆ. ಸೌಜನ್ಯ ಮಾವ ವಿಠ್ಠಲ್​ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಅಂತಾ ಸಾಮಾಜಿಕ ಹೋರಾಟಗಾರ ಗಿರೀಶ್​ ಮಟ್ಟಣ್ಣನವರ್, ಎಸ್​ಐಟಿ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿರೋದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.

ಗಿರೀಶ್ ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್​ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಅಂತೆ. ನಮಗೆ ಸೌಜನ್ಯ ಮಾವ ವಿಠ್ಠಲ್​ಗೌಡರೇ ಬುರುಡೆ ತಂದುಕೊಟ್ಟಿರೋದು, ಮಾಸ್ಕ್​ಮ್ಯಾನ್ ಚಿನ್ನಯ್ಯ ತೋರಿಸಿದ 11A ಸ್ಪಾಟ್​ನ ಸ್ವಲ್ಪ ದೂರದಲ್ಲೇ ಬುರುಡೆ ಸಿಕ್ಕಿರೋದು. ಬಂಗ್ಲಗುಡ್ಡ ಕಾಡಿನಿಂದಲೇ ತಂದಿರೋ ಬುರುಡೆಯನ್ನ ನಮಗೆ ಕೊಟ್ಟಿದ್ದಾರೆ ಅಂತಾ ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಬಾಯ್ಬಿಟ್ಟಿದ್ದಾರಂತೆ.

ಸೌಜನ್ಯ ಮಾವ ವಿಠಲ್​ ಗೌಡ​ಗೂ ಎಸ್​ಐಟಿ ಗ್ರಿಲ್

ಗಿರೀಶ್​ ಮಟ್ಟಣ್ಣನವರ್ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸೌಜನ್ಯ ಮಾವ ವಿಠ್ಠಲ್​ಗೌಡರನ್ನ ಎಸ್​ಐಟಿ ಅಧಿಕಾರಿಗಳು ಬೆಂಡೆತ್ತಿದ್ದು, ಹಂತ ಹಂತವಾಗಿ ಬುರುಡೆ ರಹಸ್ಯವನ್ನ ತೆರೆದಿಟ್ಟಿದ್ದಾರೆ. ನನಗೆ ಸ್ಥಳದಲ್ಲಿ ಕೇವಲ ಬುರುಡೆ ಮಾತ್ರ ಸಿಕ್ಕಿರೋದು, ಮರದ ಕೆಳಗೆ ಭೂಮಿ ಮೇಲ್ಭಾಗದಲ್ಲಿ ನನಗೆ ಬುರುಡೆ ಸಿಕ್ಕಿದ್ದು ಅಂತಾ ಎಸ್​ಐಟಿ ವಿಚಾರಣೆಯಲ್ಲಿ ಸೌಜನ್ಯ ಮಾವ ವಿಠ್ಠಲ್​ಗೌಡ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವರು ಹೇಳ್ತಿರೋ ಪ್ರಕಾರ ಬುರುಡೆ ಸಿಕ್ಕಮೇಲೆ ಅಸ್ಥಿಪಂಜರವೂ ಸಿಗಬೇಕು, ಹಾಗಾಗಿ ಎಸ್​ಐಟಿ, ಕಾಡಿನಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಚಿನ್ನಯ್ಯನನ್ನು ಗ್ಯಾಂಗ್​ಗೆ ಪರಿಚಯಿಸಿದ್ದ ವಿಠಲಗೌಡ

ಇನ್ನು ಇಂಟ್ರಸ್ಟಿಂಗ್ ವಿಚಾರ ಏನಂದರೆ, ಸೌಜನ್ಯ ಮಾವ ಆಗಿರುವ ವಿಠ್ಠಲ್​ಗೌಡನಿಗೆ ಮಾಸ್ಕ್​ಮ್ಯಾನ್​ ಚಿನ್ನಯ್ಯ ಮೊದಲೇ ಪರಿಚಯ ಇರೋ ವಿಚಾರ ಇದೀಗ ಗೊತ್ತಾಗಿದೆ. 2 ವರ್ಷದ ಹಿಂದೆ ಉಜಿರೆಯಲ್ಲಿ ಚಿನ್ನಯ್ಯ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಿಠ್ಠಲ್​ಗೌಡನ ಕಣ್ಣಿಗೆ ಚಿನ್ನಯ್ಯ ಬಿದ್ದಿದ್ದ. ಇಬ್ಬರ ನಡುವೆಯೂ ಪರಿಚಯ ಕೂಡ ಆಗುತ್ತೆ. ಕಾನೂನು ಪ್ರಕ್ರಿಯೆಗೆ ಒಳಪಟ್ಟ ಅಪರಿಚಿತ ಶವಗಳನ್ನ ಚಿನ್ನಯ್ಯ ಹೂಳ್ತಿರೋ ವಿಚಾರವೂ ವಿಠ್ಠಲ್​ಗೌಡನಿಗೆ ಗೊತ್ತಿತ್ತು. ಇದೇ ವಿಚಾರವನ್ನ ಬಂಡವಾಳ ಮಾಡಿಕೊಂಡ ವಿಠ್ಠಲ್​ಗೌಡ, ಗ್ಯಾಂಗ್​ಗೆ ಚಿನ್ನಯ್ಯನನ್ನ ಪರಿಚಯಿಸುತ್ತಾನೆ. ನಂತರದಲ್ಲಿ ಬುರುಡೆ ಕಥೆ ಕಟ್ಟಿ ಷಡ್ಯಂತ್ರ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಇದೆಲ್ಲವೂ ಎಸ್​ಐಟಿ ವಿಚಾರಣೆಯಲ್ಲಿ ಬಯಲಾಗಿದೆ.

ಬುರುಡೆ ತಂದಿದ್ದು ಯಾವಾಗ ಗೊತ್ತಾ?

ಒಂದು ವರ್ಷದ ಹಿಂದೆ ಈ ಬುರುಡೆ ತರಲಾಗಿದೆ. ಕಳೆದ ಮಳೆಗಾಲದ ವೇಳೆ ಬಂಗ್ಲೆಗುಡ್ಡ ಬಳಿ ವಿಠಲಗೌಡ ಬುರುಡೆ ತಂದಿದ್ದ. ಅಂದಿನಿಂದ ಒಂದು ವರ್ಷಗಳ ಕಾಲ ಬುರುಡೆ ಗ್ಯಾಂಗ್ ಬಳಿ ಇತ್ತು ಎಂಬುವುದು ಎಸ್​ಐಟಿ ವಿಚಾರಣೆ ವೇಳೆ ಬಯಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ