ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ರೈತರಿಂದ ಪ್ರತಿಭಟನೆ
ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ನೂರಾರು ರೈತರು ಐನಾಪೂರ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಿಸಲು 140 ಏಕರೆ ಜಮೀನ ರಾಜ್ಯ ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡರು ಆದರೆ, 12 ವರ್ಷ ಕಳೆದರು ಜಮೀನಿಗೆ ನೀಡಬೇಕಾದ ಪರಿಹಾರ ನೀಡದೆ ಇರದ ಹಿನ್ನಲೆಯಲ್ಲಿ ನೂರಾರು ರೈತರು ತಮ್ಮ ಜಮೀನಗಳಲ್ಲಿ ಸರ್ಕಾರ ನಿರ್ಮಿಸಿದ ಕಾಲುವೆಯಲ್ಲಿ ಇಳಿದು ಸರ್ಕಾರ ವಿರುದ್ದ ಉಗ್ರ ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ರಂದು ಐನಾಪೂರ ಏತ ನೀರಾವರಿ ಯೋಜನೆ ಮಂಗಸೂಳಿ ಹದ್ದೆಯಲ್ಲಿ ರೈತರ ಜಮೀನಗಳಲ್ಲಿ ನಿರ್ಮಿಸಿದ ಕಾಲುವೆಯಲ್ಲಿ ಇಳಿದು ವೇಳೆ ಹರಣ ಮಾಡುತ್ತಿರುವ ರಾಜ್ಯ ಸರ್ಕಾರ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಹಲವಾರು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿ ಬೇಟಿ ನೀಡಿದರು ರೈತರಿಗೆ ಸರಿಯಾಗಿ ಸ್ಪಂದನೆ ಮಾಡಿಲ್ಲ ಕೆಲ ಮುಗ್ದ ರೈತರು ಮರಾಠಿ ಭಾಷಿಕರಾಗಿರುವ ಹಿನ್ನಲೆ ಅಧಿಕಾರಿಗಳು ರೈತರಿಗೆ ಸ್ಪಂದನೆ ಮಾಡಿಲ್ಲ ನಮ್ಮಗೆ ನ್ಯಾಯ ಒದಗಿಸಿಕೊಡಿ ಎಂದರು.
ರೈತರಾದ ರಮೇಶ ಒಟಾರೆ ಮಾಹಿತಿ ನೀಡುವಾಗ ರಾಜ್ಯ ಸರ್ಕಾರದ ಐನಾಪೂರ ಏತ ನೀರಾವರಿ ಯೋಜನೆ ಕೈಗೊಂಡಿದ್ದು ಮಂಗಸೂಳಿಯ 200 ರೈತರ ಜಮೀನಗಳಲ್ಲಿ ಕಾಲುವೆ ನಿರ್ಮಿಸಿದ್ದಾರೆ. ಅಲ್ಪ ಭೂದಾರಕ ರೈತರ ಜಮೀನಿನಲ್ಲಿ ಕಾಲುವೆ ನಿರ್ಮಾಣ ಮಾಡಿದ್ದು ಸುಮಾರು 12 ವರ್ಷಕ್ಕೂ ಅಧಿಕಾ ಕಾಲ ಕಳೆದಿದೆ ಈವರೆಗೂ ಜಮೀನಿಗೆ ಒಂದು ರೂ ಕೂಡಾ ಪರಿಹಾರ ನೀಡಿಲ್ಲ ಮತ್ತು ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಬೇಸತ್ತ ರೈತರು ನಮ್ಮ ಜಮೀನುಗಳಲ್ಲಿ ಹಾಗದು ಹೋದ ಕಾಲುವೆ ಮುಚ್ಚು ಹಾಕಿ ಮುದಲಿನ ಹಾಗೆ ಜಮೀನು ನಿರ್ಮಾಣ ಮಾಡಿಕೋಳ್ಳುತ್ತೇವೆ ಎಂದು ಆಕ್ರೋಶ ನುಡಿಗಳನ್ನ ನುಡಿದಿದ್ದಾರೆ
ರೈತರಾದ ಅಣ್ಣಪ್ಪ ಚೊಪಡೆ ಶಾಹಾಜಿ ಪಾಟೀಲ ಮಾತನಾಡಿ ಮಂಗಸೂಳಿಯ ಬರಡು ಜಮೀನುಗಳಲ್ಲಿ ರಾಜ್ಯ ಸರ್ಕಾರ ನೀರು ಹರಿಸುವ ಉದ್ದೇಶದಿಂದ ಏತ ನೀರಾವರಿ ಯೋಜನೆ ಪ್ರಾರಂಭಿಸಿದೆ ಬೇರೆ ರೈತರಿಗೆ ಲಾಭದಾಯಕ ವಾಗಲಿ ಎಂಬ ಉದ್ದೇಶದಿಂದ ನಾವೂ ಅಲ್ಪ ಭೂದಾರಕ ಇದ್ದರು ಜಮೀನು ನೀಡಿದ್ದೇವೆ ಕಳೆದ 12 ವರ್ಷ ಕಳೆದರು ಸರ್ಕಾರ ನ್ಯಾಯ ನೀಡುತ್ತಿಲ್ಲ. ನಾವೂ ಮನನೊಂದು ಬೀದರ ವಿಧಾನ ಪರಿಷತ ಸದಸ್ಯ ಎಂ ಜಿ ಮೋಳೆ ಇವರಿಗೆ ವಿಷಯ ಪ್ರಸ್ತಾಪಿಸಿದಾಗ ಕಳೆದ ಅಧಿವೇಶನದಲ್ಲಿ ವಿಧಾನ ಪರಿಷತನಲ್ಲಿ ವಿಷಯ ಪ್ರಸ್ಥಾಪಿಸಿದರು.
ರಾಜ್ಯದ ಬೃಹತ್ ನೀರಾವರಿ ಸಚಿವ ಡಿ ಕೆ ಶಿವಕುಮಾರ ಉತ್ತರಿಸಿ 15 ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಇಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಭರವಸೆ ನೀಡಿ ನಾಲ್ಕು ತಿಂಗಳು ಕಳೆದರು ಈವರೆಗೂ ಯಾವೊಬ್ಬ ಅಧಿಕಾರಿಯು ಸ್ಪಂದನೆ ನೀಡಿಲ್ಲ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ನೀರಾವರಿ ಇಲಾಖೆ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡದೆ ಹೋದಲ್ಲಿ ನಮ್ಮ ಜಮೀನುಗಳಲ್ಲಿ ನಿರ್ಮಾಣ ಮಾಡಿದ್ದ ಕಾಲುವೆಗನ್ನ ಮುಚ್ಚಿ ಜಮೀನು ನಿರ್ಮಾಣ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದ ಮಂಗಸೂಳಿ ಗ್ರಾಮದ ರೈತರು.
ಈ ಪ್ರತಿಭಟನೆಯಲ್ಲಿ ಶಹಾಜಿ ಪಾಟೀಲ, ಅಸ್ಲಮ ಮುಲ್ಲಾ, ಮೋಹನ ಪಾಟೀಲ, ಪರಸು ಸಾವಂತ, ದಾನಾಜಿ ಪಾಟೀಲ, ರಾಜೇಂದ್ರ ಕಾಂಬಳೆ, ಶ್ರೀಶೈಲ ಪಾಟೀಲ, ಸುನೀಲ ಪಾಟೀಲ, ಅಕ್ಷಯ ಲಾಂಡಗೆ, ಮಲ್ಲೇಶ ಭಜಂತ್ರಿ, ಜಿ ಎನ್ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು