ಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದ ಬಗ್ಗೆ ‘ ಸುದ್ದಿ ಪ್ರಸಾರ ಮಾಡಿತ್ತು. ಆ ನಂತರ 13 ಮಂದಿ ಅಧಿಕಾರಿಗಳು ಅಮಾನತು ಕೂಡ ಆಗಿದ್ದರು. ಇದೀಗ ಲಂಚ ಪಡೆಯುವ ಸರದಿ ಕೆಎಸ್ಆರ್ಟಿಸಿಗೂ (KSRTC) ಕಾಲಿಟ್ಟಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿದ್ದಕ್ಕೆ ಸಾಕ್ಷ್ಯವೂ ಲಭ್ಯವಾಗಿದೆ. ಕೆಎಸ್ಆರ್ಟಿಸಿ ಡಿಪೋ- 1 ರಲ್ಲಿ ಸುಮಾರು 100ಕ್ಕೂ ಬಸ್ಗಳಿವೆ. ಈ ಬಸ್ಗಳು ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು ಸೇರಿದಂತೆ ಬೇರೆಬೇರೆ ರಾಜ್ಯಗಳಿಗೆ ಸಂಚಾರ ಮಾಡುತ್ತವೆ.
ಇದರಿಂದ ಚಾಲಕ ಮತ್ತು ಕಂಡಕ್ಟರ್ಗಳಿಗೆ ಸಾವಿರಾರು ರೂಪಾಯಿ ಭತ್ಯೆ ಮತ್ತು ಒಟಿ ದೊರೆಯುತ್ತದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್‌ಪೆಕ್ಟರ್ (ATI) ಸಂಗೀತ, ಅಸಿಸ್ಟೆಂಟ್ ಟ್ರಾಫಿಕ್ ಸೂಪರಿಂಟೆಂಡೆಂಟ್ (ATS) ಸ್ವಪ್ನ, ಡ್ರೈವರ್ ಮತ್ತು ಕಂಡಕ್ಟರ್ಗಳಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದು, ಈ ಬಗ್ಗೆ ಕೆಎಸ್ಆರ್ಟಿಸಿ ಎಂಡಿಗೆ ದಾಖಲೆ ಸಮೇತ ದೂರು ನೀಡಲಾಗಿದೆ.