Breaking News

ಗೋಕಾಕ್ ಫಾಲ್ಸ್: ಪ್ರವಾಸಿಗರಿಗೆ ಖುಷಿಯೋ ಖುಷಿ

Spread the love

ಬೆಳಗಾವಿ: ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಒಂದು ಕಡೆ ಪ್ರವಾಹದ ಸಂಕಟ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಪ್ರವಾಸಿಗರು ಗೋಕಾಕ್ ಫಾಲ್ಸ್​​ನ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುವ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ನಿಸರ್ಗ ಪ್ರಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಹೌದು, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಹಾಗಾಗಿ, ಜಲಾಶಯದಿಂದ ಸುಮಾರು 36 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿ ಬಿಡಲಾಗುತ್ತಿದೆ. ಇದರ ಜೊತೆಗೆ ಮಾರ್ಕಂಡೇಯ, ಬಳ್ಳಾರಿ‌ ನಾಲಾ ನೀರು ಸೇರಿಕೊಂಡು ಸುಮಾರು 53 ಸಾವಿರ ಕ್ಯೂಸೆಕ್ ನೀರು ಗೋಕಾಕ್ ಫಾಲ್ಸ್ ನಲ್ಲಿ ಜಲವೈಭವ ಸೃಷ್ಟಿಸಿದೆ. ಭೋರ್ಗರೆಯುತ್ತಿರುವ ಜಲಪಾತ ಮನಮೋಹಕವಾಗಿದೆ.

ಭಾರತದ ನಯಾನಗರ ಎಂದೇ ಖ್ಯಾತಿ ಪಡೆದಿರುವ ಗೋಕಾಲ್ ಫಾಲ್ಸ್​ನಲ್ಲಿ 180 ಅಡಿ ಎತ್ತರದಿಂದ ಧುಮ್ಮಿಕ್ಕಿ ಬೀಳುತ್ತಿರುವ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬ. 2019ರ ಬಳಿಕ ಇದೇ ಮೊದಲ‌ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಲ್ಲು ಬಂಡೆಗಳ ಹಾಸಿಗೆ ಮೇಲಿಂದ ಬಳಕುತ್ತಾ ಬರುವ ಘಟಪ್ರಭೆಯ ವೈಯಾರ, ಕಂದು ಬಣ್ಣದ ನೀರು ಮುಂದೆ 180 ಅಡಿ ಕೆಳಗೆ ಹಾಲ್ನೊರೆಯಂತೆ ಚಿಮ್ಮುವ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.


Spread the love

About Laxminews 24x7

Check Also

ಉನ್ನತ ಶಿಕ್ಷಣಕ್ಕೆ ಸರ್ಕಾರಿ ಸೇವಾ ನಿರತ ವೈದ್ಯರನ್ನು ಬಿಡುಗಡೆಗೊಳಿಸದ ಸರ್ಕಾರ ಕ್ರಮಕ್ಕೆ ಹೈಕೋರ್ಟ್​ ತರಾಟೆ

Spread the love ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾನಿರತ ವೈದ್ಯರಿಗೆ ಉನ್ನತ ಶಿಕ್ಷಣ ಪಡೆಯಲು ಸೇವೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯ ನೀಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ