ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸೋಣ.
ನಿಪ್ಪಾಣಿ ಕ್ಷೇತ್ರದ ಬೆನಾಡಿ (ಮಂಗಾವತಿ ಮರಡಿ) ಗ್ರಾಮದಲ್ಲಿ 30 ಲಕ್ಷ ರೂ.ಮೊತ್ತದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ,ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿ,ಸತ್ಕಾರ ಸ್ವೀಕರಿಸಿ, ಮಾತನಾಡಲಾಯಿತು.ಇದಕ್ಕೂ ಮೊದಲು ಮುದ್ದು ವಿಧ್ಯಾರ್ಥಿಗಳು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೌ. ಮಹಾದೇವಿ ನಾಯಿಕ,ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ರಮೇಶ ಪಾಟೀಲ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಸತ್ಯಪ್ಪ ಹಜಾರೆ,ಶ್ರೀ ಪಾಂಡು ಪಾಟೀಲ,ಶ್ರೀ ಭರತ ಮಂಗಾವತೆ,ಬಿಜೆಪಿ ಗ್ರಾಮೀಣ ಮಹಿಳಾ ಅಧ್ಯಕ್ಷರಾದ ಸೌ.ಲಕ್ಷ್ಮೀ ಖೋತ,ಗ್ರಾಮ ಪಂಚಾಯತ್ ಸದಸ್ಯರು,ಎಸ್.ಡಿ.ಎಂ.ಸಿ.ಅಧ್ಯಕ್ಷರು, ಸದಸ್ಯರು,ಸ್ಥಳೀಯ ಮುಖಂಡರು ಶಿಕ್ಷಕರು ಹಾಗೂ ಮುದ್ದು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7