ಭಯೋತ್ಪಾದಕರಿಗೆ ಕರ್ನಾಟಕದ ಜೈಲುಗಳು ಸ್ವರ್ಗವಾಗಿವೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜೈಲಿನಲ್ಲಿ ಮೊಬೈಲ್ ಸಿಗ್ತಿವೆ, ಆಥಿತ್ಯ ಸಿಗ್ತಿದೆ ಭಯೋತ್ಪಾದಕರಿಗೆ ಕರ್ನಾಟಕದ ಜೈಲುಗಳು ಸ್ವರ್ಗವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು ಕೇಂದ್ರ ತನಿಖಾ ಸಂಸ್ಥೆ ಪತ್ತೆ ಮಾಡಿದ ಮೇಲೆ ಇದೀಗ ತನಿಖೆ ಮಾಡ್ತೇವೆ ಅಂತ ಸರ್ಕಾರ ಹೇಳಿದೆ. ಭಯೋತ್ಪಾದಕರಿಗೆ ಕೂಡಾ ಅನಿಸಿದೆರಾಜ್ಯದಲ್ಲಿ ರೋರು ನಮಗೆ ಸಹಕಾರ ಕೊಡ್ತಾರೆ ಅಂತ. ಹೀಗಾಗಿ ಭಯೋತ್ಪಾದಕರಿಗೆ ಕರ್ನಾಟಕ ಸ್ಲೀಪರ್ ಸೆಲ್ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಯಂತ್ರ ಕಡೆ ಗಮನ ಹರಿಸಬೇಕು. ಆಂತರಿಕ ಭದ್ರತೆಯ ಲೋಪ ಸರಪಡಿಸಲು ಇಲ್ಲಿ ಬಂದು ಅಧಿಕಾರ ನಡೆಸಿ ಸಿದ್ದರಾಮಯ್ಯರಿಗೆ ನಾನೇ ಮುಖ್ಯಮಂತ್ರಿ ಅಂತ ಹೇಳಿಕೊಳ್ಳೋ ಸ್ಥಿತಿ ಬಂದಿದೆ ಎಂದರು.
ಬೇರೆ ರಾಜ್ಯದ ಯಾವ ಸಿಎಂ ಕೂಡ ಈ ರೀತಿ ಹೇಳ್ತಿಲ್ಲ ಅಧಿಕಾರ ಹಂಚಿಕೆ ಬಗ್ಗೆ ಸುಳ್ಳು ಯಾರು ಹೇಳ್ತಾರೆ ಅಂತ ಖರ್ಗೆ ಮತ್ತು ರಾಹುಲ್ ಗಾಂಧಿ ಉತ್ತರ ನೀಡಬೇಕು.
ಸುರ್ಜೇವಾಲ್ ಹದಿನೈದು ದಿನಕ್ಕೊಮ್ಮೆ ಬಂದು ಏನು ಮಾಡಿ ಹೋಗ್ತಾರೋ ಗೊತ್ತಿಲ್ಲ. ನಿಮಗೆಷ್ಟು ಬೆಂಬಲ ಇದೆ ಅವರಿಗೆ ಎಷ್ಟು ಶಾಸಕರ ಬೆಂಬಲ ಇದೆ ಅಂತ ಸಿಎಂ ಸ್ಪಷ್ಟಪಡಿಸಬೇಕು. ಕೆಲ ಯೋಜನೆಗಳಿಗೆ ಬೆಂಬಲ ನೀಡುವಂತೆ ಡಿ.ಕೆ ನನ್ನನ್ನ ಭೇಟಿಯಾದಾಗ ಕೇಳಿದ್ದಾರೆ.
ಆದ್ರೆ ಅವರ ಒಳ ಒಪ್ಪಂದದ ಬಗ್ಗೆ ಎಲ್ಲವೂ ಗೊತ್ತಿದೆ. ಆದ್ರೆ ಅದು ಅವರ ವೈಯಕ್ತಿಕ ವಿಚಾರ ಅದನ್ನ ಈಗ ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಸರ್ಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ನಾವು ಸರ್ಕಾರ ಕೆಡವುವ ಯಾವುದೇ ಪ್ರಯತ್ನ ಮಾಡಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ
ಯಾವುದೇ ಬಣದವರು ಸಾರ್ವಜನಿಕ ಹೇಳಿಕೆ ನೀಡದಂತೆ ಹೇಳಿದ್ದಾರೆ. ಅವರ ಬಗ್ಗೆ ರಾಷ್ಟ್ರೀಯ ನಾಯಕರು ಗಮನ ಹರಿಸುತ್ತಾರ. ನಾನೇ ರಾಜ್ಯಾಧ್ಯಕ್ಷ ಆಗಿ ಮುಂದುವರಿಯುತ್ತೇನೆ ಅಂತ ವಿಜಯೇಂದ್ರ ಹೇಳಿಲ್ಲ ಎಂದರು.
ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆಯಾಗುತ್ತದೆ. ಚುನಾವಣೆ ಪ್ರಕ್ರಿಯೇ ನಡೆಯುವುದರಿಂದ ಸ್ವಲ್ಪ ವಿಳಂಭವಾಗುತ್ತಿದೆ ಎಂದರು.