ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ; ಪಿ ಎಸ್ ಆಯ್ ನಿಖಿಲ್ ಕಾಂಬಳೆ ಅಮಾನತ್ತು
ಹುಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸಪೇಕ್ಟರ ನೀಖಿಲ್ ಕಾಂಬಳೆ ಅವರನ್ನು ಅಮಾನತ್ತು ಮಾಡಿ ಬೆಳಗಾವಿ ಪೋಲಿಸ್ ವರಿಷ್ಟಾಧಿಕಾರಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.
ಜೂನ್ 26 ರಂದು ಅಕ್ರಮವಾಗಿ ಗೋ ಸಾಗಾಟ ಮಾಡುವವರನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಹಿಡಿದು ಹುಕ್ಕೇರಿ ಪೋಲಿಸ್ ಠಾಣೆಗೆ ತಂದಾಗ ಪಿ ಎಸ್ ಆಯ್ ನಿಖಿಲ್ ಕಾಂಬಳೆ ಗೋ ಸಾಗಾಟ ಮಾಡುವವರ ಮತ್ತು ಶ್ರೀ ರಾಮ ಸೇನೆ ಕಾರ್ಯಕರ್ತರ ನಡುವೆ ಸಂಧಾನ ಮಾಡಿ ಯಾವುದೇ ಪ್ರಕರಣ ಧಾಖಲಿಸದೆ ಬಿಟ್ಟು ಕಳಿಸಿದ ಮತ್ತು ರೌಡಿಶೀಟರ್ ಹಾಗೂ ಬೆಳಗಾವಿ ಜಿಲ್ಲೆಯಿಂದ
ಗಡಿಪಾರಾದ ಯುವಕನಿಗೆ ರಕ್ಷಣೆ ನೀಡಿ ಬಿಟ್ಟಿದ್ದರಿಂದ ಮತ್ತು ಈ ಪ್ರಕರಣ ಸಂಬಂಧಿಸಿದಂತೆ ಇಂಗಳಿ ಗ್ರಾಮದಲ್ಲಿ ಅಶಾಂತಿ ತೋರಿದ ಹಿನ್ನಲೆಯಲ್ಲಿ ಎಸ್ ಪಿ ಗುಳೆದ ಅಮಾನತ್ತಿನ ಆದೇಶ ಮಾಡಿದ್ದಾರೆ.