Breaking News

ಮರಾಠಾ ಲಘು ಪದಾತಿದಳದ – ೫ನೇ ಬ್ಯಾಚ್ ಅಗ್ನಿವೀರ ಸೈನಿಕರ ನಿರ್ಗಮನ ಪಥ ಸಂಚಲನ

Spread the love

ಮರಾಠಾ ಲಘು ಪದಾತಿದಳದ – ೫ನೇ ಬ್ಯಾಚ್ ಅಗ್ನಿವೀರ ಸೈನಿಕರ ನಿರ್ಗಮನ ಪಥ ಸಂಚಲನ
ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ಲ್ ಸೆಂಟರ್‌ಲ್ಲಿ ಕಳೆದ ೩೧ ವಾರಗಳ ಕಾಲ ಸೈನಿಕ ತರಬೇತಿ ಪಡೆದ ೬೫೯ ಅಗ್ನಿವೀರ ಸೈನಿಕರ ತಂಡದ ನಿರ್ಗಮನ ಪಥ ಸಂಚಲನ ಮರಾಠಿ ಲಘು ಪದಾತಿದಳ ಮೈದಾನದಲ್ಲಿ ಜುರುಗಿತು. ಎಂಎಲ್‌ಆಯ್‌ಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ ಅವರು ಪರೇಡ್ ಗೌರವ ವಂದನೆ ಸ್ವೀಕರಿಸಿದರು.
ಅಗಿವೀರ ಗಜಾನನ ರಾಠೋಡ್ ನೇತೃತ್ವದಲ್ಲಿ ನಡೆದ ಸೈನಿಕರ ಪಥ ಸಂಚಲನ ಅಕರ್ಷಕವಾಗಿತ್ತು. ಎಂಎಲ್‌ಆಯ್‌ಆರ್‌ಸಿ ಹಿರಿಯ ಅಧಿಕಾರಿಗಳು, ಬೆಳಗಾವಿಯ ಗಣ್ಯರು, ಶಾಲಾ ಮಕ್ಕಳು ಹಾಗೂ ಅಗ್ನಿವೀರ ಸೈನಿಕರ ಕುಟುಂ ವರ್ಗದವರು ಉಪಸ್ಥಿತರಿದ್ದರು.
ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಹಾಗೂ ಧರ್ಮಗ್ರಂಥ ಸಮ್ಮುಖದಲ್ಲಿ ಅಗ್ನವೀರರಿಗೆ ಪ್ರಮಾಣ ವಚನ ಬೋಧಿಸಲಾಯಿತು. ತರಬೇತಿ ಸಂದರ್ಭದಲ್ಲಿ ಉತ್ತಮ ಪ್ರದರ್ಶ ನೀಡಿದ ಪ್ರತಿಭಾವಂತ ಅಗ್ನಿವೀರರಿಗೆ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ವಿಕ್ಟೋರಿಯ ಕ್ರಾಸ್‌ದಲ್ಲಿ ಸಾಧನೆ ಮಾಡಿದ ಅಗ್ನಿವೀರ ಯಶವಂತ ಘಾಡ್ಗೆ ಹಾಗೂ ಅತ್ಯುತ್ತಮ ಅಗ್ನಿವೀರನಾಗಿ ಹೊರಹೊಮ್ಮಿದ ಕಪ್ಲೆ ಕೃಷ್ಣತ್ ಅವರಿಗೆ ವಿಶೇಷ ಪದಕ ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ, ಭಾರತೀಯ ಸೈನಿಕ ವ್ಯವಸ್ಥೆಯ ಇತಿಹಾಸದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತ ಬಂದಿರುವ ಎಂಎಲ್‌ಆಯ್‌ಆರ್‌ಸಿ ಅತ್ಯಂತ ಪ್ರಾಚೀನ ತರಬೇತಿ ಕೇಂದ್ರವಾಗಿದೆ. ಸೈನಿಕ ತರಬೇತಿ ನೀಡುವಲ್ಲಿ ತನ್ನದೇ ಆದ ಭವ್ಯತೆ ಹಾಗೂ ಶ್ರೀಮಂತಿಕೆಯನ್ನು ಹೊಂದಿರುವ ಈ ಕೇಂದ್ರ ಸೈನಿಕರನ್ನು ಸಿದ್ಧಪಡೆಸುವಲ್ಲಿ ವಿಶೇಷ ಪಾತ್ರ ವಹಿಸುತ್ತ ಬಂದಿದೆ. ತರಬೇತಿ ಪಡೆದ ಅಗ್ನಿವೀರರು ದೇಶಸೇವೆಗೆ ಯಾವುದೇ ಹಿಂಜರಿಗೆ ಇಲ್ಲದೆ ಧೈರ್ಯ ಮತ್ತು ನಿಷ್ಠೆಯಿಂದ ಅರ್ಪಿಸಿಕೊಳ್ಳಬೇಕು. ಶಿಸ್ತು ಹಾಗೂ ದೈಹಿಕ ಸದೃಢತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ