Breaking News

ಚಿನ್ನದ ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿದ್ರು

Spread the love

ಹಾಸನ, (ಮೇ 31): ಚಿನ್ನಾಭರಣಕ್ಕಾಗಿ ಉದ್ಯೋಗ ಕೊಟ್ಟ ಮಾಲೀಕನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ.

ಅರಸೀಕೆರೆ (arsikere) ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಎನ್ನುವರನ್ನು ಕಾರ್ಮಿಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅರಸೀಕೆರೆ ಪಟ್ಟಣದ ಕೆಎಸ್ ಆರ್​ ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಕಾಂಟ್ರಕ್ಟರ್ ವಿಜಯ್ ಕುಮಾರ್ ನನ್ನು ಚಿನ್ನದ ಒಡವೆಗಳನ್ನು ದೋಚುವುದಕ್ಕಾಗಿ ಅವರ ಬಳಿ ಕೆಲಸ ಮಾಡುತ್ತಿದ್ದವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ವಿಜಯ್​ ಮೈಮೇಲಿದ್ದ ಬಂಗಾರದ ಚಿನ್ನ ಹಾಗೂ ಕೈನಲ್ಲಿದ್ದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

ಅಚ್ಚರಿ ಅಂದ್ರೆ ಉಂಗುರು ತೆಗೆಯಲು ಬರಲಿಲ್ಲವೆಂದು ಕೈ ಬೆರಳನ್ನೇ ಕಟ್ ಮಾಡಿಕೊಂಡು ಕೊಂಡೊಯ್ದಿದ್ದಾರೆ.ವಿಕ್ರಂನಿಗೆ ಮೊದಲಿನಿಂದಲೂ ವಿಜಯ್ ಕುಮಾರ್ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿತ್ತು. ಈ ಸಂಬಂಧ ಪತ್ನಿ ಹಾಗೂ ಮಕ್ಕಳನ್ನು ಊರಿನಲ್ಲಿ ಬಿಟ್ಟು ಮತ್ತೋರ್ವ ಸ್ನೇಹಿತನನ್ನು ಕರೆದುಕೊಂಡು

ಬಂದಿದ್ದ. ಬಂದು ಒಂದು ವಾರದಲ್ಲಿ ನೆಪವೊಂದನ್ನು ಹೇಳಿ ವಿಜಯ್ ಕುಮಾರ್​ ನನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ. ಬಳಿಕ ವಿಜಯ್ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ ಹಣ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ಲದೇ ಒಂದು ಉಂಗುರ ತೆಗೆಯಲು ಬರದಿದ್ದಾಗ ಕೈ ಬೆರಳನ್ನೇ ಕಟ್ ಮಾಡಿಕೊಂಡು ಬಳಿಕ ಉಂಗುರ ತೆಗೆದುಕೊಂಡು ಹೋಗಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ