ಬಹು ಸಂಸ್ಕೃತಿ ಹಾಗೂ ಗಡಿನಾಡು ಬೆಳಗಾವಿ ಜಿಲ್ಲೆಯ ಜನಪ್ರಿಯ ಜಿಲ್ಲಾಧಿಕಾರಿ ಸುಧೀರ್ಘ ಅವಧಿ ಸೇವೆ ಸಲ್ಲಿಸಿದ ಎನ್. ಜಯರಾಮ್ ಸರ್ ಇಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಯಳ್ಳೂರು ಗ್ರಾಮ ಬೆಳಗಾವಿ ತಾಲೂಕಿನಲ್ಲಿದ್ದರೂ ಹಲವು ದಶಕಗಳಿಂದ ಬಾಹಿರವಾಗಿ ಸ್ಥಾಪಿಸಲಾಗಿದ್ದ ಮರಾಠಿ ನಾಮ ಫಲಕವನ್ನು ತೆರವುಗೊಳಿಸುವ ಸಾಹಸಕ್ಕೆ ಕೈಹಾಕಿ ನಾಡದ್ರೋಹಿಗಳಿಗೆ ತಮ್ಮದೇ ಕಾರ್ಯವೈಖರಿಯ ಮೂಲಕ ಚಾಟಿ ಬಿಸಿದ್ದರು.
ಅಲ್ಲದೇ 2013 ಫೆಬ್ರವರಿಯಿಂದ 2017 ವರೆಗೆ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಜಿಲ್ಲೆಯ ಆಡಳಿತ ಯಂತ್ರ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು.
ಜಿಲ್ಲೆಯ ಜನರು ಕಾರ್ಯ ನಿಮಿತ್ತ ಡಿಸಿ ಕಚೇರಿಗೆ ಬಂದ ಜನರಿಗೆ ತಮ್ಮ ಕೊಠಡಿ ಬಾಗಿಲನ್ನು ಸದಾಕಾಲವೂ ತೆರೆದಿಡುತ್ತಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದರಿಂದ ಜನರು ತಮ್ಮ ಕೆಲಸ ಆದ ನಂತರವೂ ತಮ್ಮಿಂದ ಕೆಲಸ ಆಗಿದೆ ಎಂದು ಧನ್ಯವಾದ ತಿಳಿಸಲು ಆಗಮಿಸಿರುವುದನ್ನು ಗಮನಿಸಿದ್ದೇವೆ.
ಅಲ್ಲದೆ ಹಳ್ಳಿಯ ಜನರು ಡಿಸಿ ಅವರ ಕೊಠಡಿ ಒಳಗೆ ಹೋಗುವ ಸಮಯದಲ್ಲಿ ತಮ್ಮ ಚಪ್ಪಲಿಯನ್ನು ಹೊರಗೆ ಬಿಟ್ಟು ಬರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ತಮ್ಮನ್ನು ಭೇಟಿ ಮಾಡಲು ಬರುವ ಜನರು ಯಾವುದೇ ಕಾರಣಕ್ಕೂ ಕೊಠಡಿ ಹೊರಗೆ ಚಪ್ಪಲಿಗಳನ್ನು ಬಿಟ್ಟು ಕೊಠಡಿ ಒಳಗೆ ಬರಬಾರದು ಎಂದು ಅದಕ್ಕಾಗಿಯೇ ಓರ್ವ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಿದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸತ್ಕರಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ತಮ್ಮ ಅಧೀನ ಸಿಬ್ಬಂದಿಯೊಂದಿಗೂ ಉತ್ತಮ ಕಾರ್ಯವೈಖರಿ ಹೊಂದಿದ್ದರು.
ಎನ್. ಜಯರಾಮ್ ಸರ್ ಬೆಳಗಾವಿಯಲ್ಲಿಜಿಲ್ಲಾಧಿಕಾರಿ ಆಗಿದ್ದ ಸಮಯದಲ್ಲಿ, ಪ್ರಭಾರ ಪ್ರಾದೇಶಿಕ ಆಯುಕ್ತರಾಗಿ, ಮಹಾನಗರ ಪಾಲಿಕೆ ಆಡಳಿತಾಧಿಕಾರಿ, ಜಿಪಂ ಸಿಇಒ ಆಗಿ ಏಕಕಾಲಕ್ಕೆ ಆಡಳಿತ ನಡೆಸಿದ್ದಾರೆ.
ಅಲ್ಲದೇ ಭಾಷಾ ವಿವಾದ ದಲ್ಲೇ ಕಾಲಹರಣ ಮಾಡುತ್ತಿದ್ದ ಮಹಾನಗರ ಪಾಲಿಕೆ ಯನ್ನು ಸೂಪರ್ ಸೀಡ್ ಮಾಡಿದ್ದರು.
ಸುಧೀರ್ಘ ಕಾಲದ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಜಯರಾಮ್ ಸರ್ ಅವರು ಮುಂದಿನ ವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ
Laxmi News 24×7