ಬೆಂಗಳೂರು : ನಾನು ಮಹಾನಾಯಕ ಅಲ್ಲ. ನಾನು ಈಗ ಸಿಎಂ ಕ್ಯಾಂಡಿಡೇಟ್ ಅಲ್ಲ. ನಾನು 2028ಕ್ಕೆ ಗುರಿ ಇಟ್ಟುಕೊಂಡವನು. ಈಗ ನಾನೇನು ಅದಕ್ಕೆ ಒತ್ತಡ ಹಾಕುತ್ತಿಲ್ಲ. ನಮ್ಮದೇನಿದ್ರೂ 2028ಕ್ಕೆ ಎಂದು ಸಚಿವ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅಧಿಕಾರದಲ್ಲಿ ಯಾರೂ ಶಾಶ್ವತ ಅಲ್ಲ. ಚಕ್ರ ತಿರುಗುತ್ತಲೇ ಇರುತ್ತದೆ. ಡಿಸಿಎಂ ಏನೋ ಉದ್ದೇಶ ಇಟ್ಟು ಮಾಡಿರಬಹುದು. ಈ ಹಿಂದೆ ಹೊಸಪೇಟೆ, ವಿಜಯನಗರ ಮಾಡಿದ್ರು. ಯುಪಿಯಲ್ಲೂ ಹಲವು ಬದಲಾವಣೆ ಮಾಡಿದ್ದಾರೆ ಎಂದರು.
ಬೆಳಗಾವಿ ವಿಭಜನೆ ವಿಚಾರವಾಗಿ ಮಾತನಾಡಿ, ಸಿಎಂ ಅವರನ್ನು ಕೇಳಿದ್ದೇವೆ. ಟೈಮ್ ಇಲ್ಲದಾಗ ಏನೂ ಆಗುವುದಿಲ್ಲ. ಜಿಗಿಯಬೇಕಾದರೆ ನೀರು ಇರಬೇಕು. ನೀರು ಇದ್ದಾಗ ಜಿಗಿಯಬೇಕು. ನೀರು ಬರುವವರೆಗೆ ಕಾಯುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದರು.
ಮನೆ ತೆಗೆದುಕೊಳ್ಳಲು ಟ್ರಸ್ಟ್ನಿಂದ ರನ್ಯಾ ರಾವ್ಗೆ ಹಣ ಕೊಟ್ಟಿದ್ದಾರೆ ಎಂದು ಡಾ. ಜಿ. ಪರಮೇಶ್ವರ್ ಅವರೇ ಹೇಳಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ಯಾಬಿನೆಟ್ ಸಭೆಯಲ್ಲಿ ನಿನ್ನೆ ಈ ಬಗ್ಗೆ ಏನೂ ಚರ್ಚೆ ಆಗಿಲ್ಲ. ಎಲ್ಲರ ಮೇಲೆ ಆರೋಪ ಬರುತ್ತಿರುತ್ತದೆ. ರಾಜಕೀಯ ಪ್ರೇರಿತ ಎಂದು ಹೇಳಲಾಗುತ್ತಿದೆ. ಇಡಿಯವರಿಗೆ ಎಲ್ಲ ಪೇಪರ್ ಕೊಟ್ಟಿದ್ದಾರೆ. ಸಹಕಾರ ಮಾಡ್ತೇವೆ ಅಂತ ಹೇಳಿದ್ದಾರೆ. ಅದಕ್ಕೆ ಬೇಕಾದ ದಾಖಲೆ ಕೊಡ್ತಾರೆ. ದಾಳಿ ಈಗಲೇ ಏನಕ್ಕೆ ಅಂತ ಹೇಳಲಾಗುವುದಿಲ್ಲ. ಸ್ವಲ್ಪ ದಿನ ಕಾಯಬೇಕು. ಚೆಕ್ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಅವರು ಕ್ಯಾಶ್ ಏನು ಕೊಟ್ಟಿಲ್ಲ. ಚೆಕ್ ಮೂಲಕ ಕೊಟ್ಟಿದ್ದಾರೆ. ಅದು ಅಧಿಕೃತ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ದಲಿತ ನಾಯಕ ಟಾರ್ಗೆಟ್ ಅಂತ ಹೇಳಲು ಆಗಲ್ಲ: ಅವರ ಸಂಸ್ಥೆ ಬಹಳ ದೊಡ್ಡದು. 2,000 ಕೋಟಿ ರೂ. ವ್ಯವಹಾರ ಇರಬಹುದಾದ ಸಂಸ್ಥೆಯಾಗಿದೆ. 30 ವರ್ಷಗಳಿಂದ ಅವರ ಸಂಸ್ಥೆ ಇದೆ. ಬೇರೆಯದನ್ನು ಪರ್ಚೇಸ್ ಮಾಡಿರಬಹುದು. ಅವರಿಗೆ ಎಲ್ಲ ಅವಕಾಶ ಇರಲಿದೆ. ಚೆಕ್ ಕನೆಕ್ಟ್ ಆದ ಮೇಲೆ ಆರೋಪ ಸರಿಯಲ್ಲ. ರಾಜಕೀಯದಲ್ಲಿ ಇವೆಲ್ಲ ಇರುತ್ತೆ. ದಲಿತ ನಾಯಕ ಅಂತ ಹೇಳಲು ಆಗುವುದಿಲ್ಲ. ಕಾಂಗ್ರೆಸ್ ಪಾರ್ಟಿ ಅಂತ ಹೇಳಬೇಕು. ಪಾರ್ಟಿ ಸ್ಟಾಂಡ್ ಏನಿದೆ ನೋಡೋಣ. ನಾನು ಅವರನ್ನು ಭೇಟಿ ಮಾಡಿದ್ದೆ. ಎಲ್ಲ ದಾಖಲೆ ಕೊಡೋಕೆ ಹೇಳಿದ್ದೇನೆ. ಪರಮೇಶ್ವರ್ ಅವರ ಸಿಬ್ಬಂದಿಗೆ ಹೇಳಿದ್ದಾರಂತೆ. ಅದರ ಬಗ್ಗೆ ಅವರು ನನ್ನ ಬಳಿ ಹೇಳಿದ್ದಾರೆ ಎಂದರು.