ನವದೆಹಲಿ, ಮೇ 9: ಭಾರತ- ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮೇ 10ರವರೆಗೆ ಬಹು ನಗರಗಳಿಗೆ ವಿಮಾನಗಳ ಹಾರಾಟವನ್ನು ಇಂಡಿಗೋ (IndiGo) ರದ್ದುಗೊಳಿಸಿದೆ. ಮೇ 10ರಂದು ರಾತ್ರಿ 11.59ರವರೆಗೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇಂಡಿಗೋ ಸಂಸ್ಥೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ ಏರ್‌ಲೈನ್ಸ್, “ನಿಮ್ಮ ಸುರಕ್ಷತೆ ಅತ್ಯಂತ ಮುಖ್ಯ. ಈ ನಗರಗಳಿಗೆ ಇಂದಿನಿಂದ ವಿಮಾನಗಳನ್ನು ಮೇ 10ರವರೆಗೆ ರದ್ದುಗೊಳಿಸಲಾಗಿದೆ. ನೀವು ಸುಲಭವಾಗಿ ಪ್ರಯಾಣಿಸಲು ನಾವು ಅನುಕೂಲ ಮಾಡಿಕೊಡುತ್ತೇವೆ. ವಿಮಾನದ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ ಮರು ಬುಕ್ ಮಾಡಲು ಅಥವಾ ಮರುಪಾವತಿ ಪಡೆಯಲು, http://bit.ly/31lwD2y ಗೆ ಭೇಟಿ ನೀಡಿ” ಎಂದು ಪೋಸ್ಟ್ ಮಾಡಿದೆ.ಶ್ರೀನಗರ, ಜಮ್ಮು, ಲೇಹ್, ಅಮೃತಸರ, ಚಂಡೀಗಢ, ಧರ್ಮಶಾಲಾ, ಜೋಧ್‌ಪುರ, ಬಿಕಾನೇರ್, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂಡಿಗೋ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯದಲ್ಲಿದೆ ಎಂದು ತಿಳಿಸಿದೆ.
Laxmi News 24×7