ಲಾಡ್ ಅವರಿಗೆ ತಮ್ಮ ಕ್ಷೇತ್ರವೇ ಕಾಣೋದಿಲ್ಲ: ಶಾಸಕ ಬೆಲ್ಲದ ತಿರುಗೇಟು.
….ಬಿಜೆಪಿ ಮೋದಿ ವಿರುದ್ಧವೇ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದಿದ್ದ ಸಚಿವ ಲಾಡ್‌ಗೆ ಬೆಲ್ಲದ ಟಾಂಗ್…
ಬಿಜೆಪಿ ಮೋದಿ ವಿರುದ್ಧವೇ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯೆಪ್ರತಿಕ್ರಿಯೆಯಾಗಿ ನಿಒಡ ಲಾಡ್ ಹೇಳಿಕೆಗೆ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಸಚಿವ ಲಾಡ್ ಅವರಿಗೆ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಂತೋಷ ಲಾಡ್ ಅವರಿಗೆ ತಮ್ಮ ಕ್ಷೇತ್ರ ಕಲಘಟಗಿಯೇ ಕಾಣೋದಿಲ್ಲ. ಇವರು ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಗೆ ಒಂದು ರೂಪಾಯಿಯೂ ಅನುದಾನ ಬಂದಿಲ್ಲ.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದು ಕಾಂಗ್ರೆಸ್ ಅಲ್ವಾ?, ವಿದ್ಯುತ್ ದರ ಏರಿಸಿದ್ದು ಕಾಂಗ್ರೆಸ್ ಅಲ್ವಾ?. ಮಾತ್ ಮಾತಿಗೂ ಲಾಡ್ ಅವರು ಪ್ರಧಾನಿ ಮೋದಿ ಅವರ ಹೆಸರು ಎಳೆದು ತರುತ್ತಾರೆ. ಇದು ಸಚಿವ ಲಾಡ್ ಅವರಿಗೆ ಸರಿ ತರುವಂತದ್ದಲ್ಲ. ಮೋದಿ ಹೆಸರು ಹೇಳಿದರೆ ತಾವು ದೊಡ್ಡವರಾಗುತ್ತಾರೆ ಎಂದು ಲಾಡ್ ತಿಳಿದುಕೊಂಡಿದ್ದಾರೆ. ಜನ ಧಾರವಾಡಕ್ಕೆ ಏನು ಮಾಡಿದ್ದೀರಿ ಎಂದು ಕೇಳುತ್ತಿದ್ದಾರೆ. ಮಹಾನಗರ ಪಾಲಿಕೆಯ ನೌಕರರ ಸುಮಾರು 25 ಕೋಟಿ ಸಂಬಳ ಬರಬೇಕಿದೆ.
ಅದು ಇನ್ನೂ ಬಂದಿಲ್ಲ. 120 ಕೋಟಿ ರೂಪಾಯಿ ರಾಜ್ಯ ಸರ್ಕಾರದಿಂದ ಪಾಲಿಕೆ ಅನುದಾನ ಬರಬೇಕಿದೆ. ಮೊದಲು ಅದನ್ನು ಕೊಡಿಸುವ ಕೆಲಸವನ್ನು ಲಾಡ್ ಅವರು ಮಾಡಲಿ. ಲಾಡ್ ಅವರು ಮೊದಲು ನಮ್ಮ ಜಿಲ್ಲೆಗೆ ಮಾಡಬೇಕಾಗಿರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಮೋದಿ ಅವರನ್ನು ಆರೋಪಿಸುತ್ತಿದ್ದಾರೆ.
ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ನಾವು ಜನಾಕ್ರೋಶ ಯಾತ್ರೆ ಮಾಡುತ್ತಿದ್ದೇವೆ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು ಎಂದು ದೆಹಲಿಗೆ ಹೋಗಿದ್ದೆ ಎಂಬುದು ಸುಳ್ಳ ವದಂತಿ. ಖಾಸಗಿ ಕೆಲಸದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ. ಪಕ್ಷ ನೀಡಿರುವ ಈಗಿನ ಜವಾಬ್ದಾರಿಯಲ್ಲೇ ನಾನು ಸಂತೋಷವಾಗಿದ್ದೇನೆ ಎಂದರು.
Laxmi News 24×7