Breaking News

ಹುಕ್ಕೇರಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರೀತವಾಗಿ ವಿಲೆವಾರಿ

Spread the love

ಹುಕ್ಕೇರಿ : ತ್ವರೀತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವದು – ನೂತನ ನ್ಯಾಯಾಧೀಶ ಗುರು ಪ್ರಸಾದ
ಹುಕ್ಕೇರಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರೀತವಾಗಿ ವಿಲೆವಾರಿ ಮಾಡಲಾಗುವದು ಎಂದು ನೂತನ ಕಿರಿಯ ನ್ಯಾಯಾಧೀಶ ಗುರು ಪ್ರಸಾದ ಹೇಳಿದರು.
ಅವರು ಇಂದು ಹುಕ್ಕೇರಿ ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಅಯೋಜಿಸಿದ ನೂತನ ನ್ಯಾಯಾಧೀಶ ಗುರು ಪ್ರಸಾದ ರವರಿಗೆ ಸ್ವಾಗತ ಹಾಗೂ ನಿರ್ಗಮಿತ ಪ್ರಭಾರಿ ನ್ಯಾಯಾಧೀಶ ನೇಮಚಂದ್ರ ರವರಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಹಿರಿಯ ನ್ಯಾಯವಾದಿಗಳಾದ ಪಿ ಆರ್ ಚೌಗಲಾ, ಪಾಸಪ್ಪಗೋಳ, ಎಮ್ ಎಮ್ ಪಾಟೀಲ, ಬಿ ಆರ್ ಚಂದರಗಿ ,ದಡ್ಡಿಮನಿ ಮೊದಲಾದವರು ನೂತನ ನ್ಯಾಯಾಧೀಶರಿಗೆ ಮತ್ತು ನಿರ್ಗಮಿಸುತ್ತಿರುವ ನ್ಯಾಯಾಧೀಶರಿಗೆ ಸತ್ಕರಿಸಿ ಅಭಿನಂದಿಸಿದರು.
ವೇದಿಕೆ ಮೇಲೆ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಉಪಾದ್ಯಕ್ಷ ಬಿ ಎಮ್ ಜಿನರಾಳಿ, ಅಪರ ಸರಕಾರಿ ವಕೀಲ ಅನಿಲ ಕರೋಶಿ, ಕಾರ್ಯದರ್ಶಿ ಎಸ್ ಜೆ ನದಾಫ್, ವಿಠ್ಠಲ ಘಸ್ತಿ, ಎ ಎ ಬಾಗೆವಾಡಿ ,ನಾಗರತ್ನಾ ಗುರುಪ್ರಸಾದ, ಅನಿತಾ ಕುಲಕರ್ಣಿ ಉಪಸ್ಥಿತರಿದ್ದರು
.
ಸತ್ಕಾರ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಗುರುಪ್ರಸಾದ ನಾನು ಇಲ್ಲಿಗೆ ಬಂದಿರುವದು ಪ್ರಕರಣಗಳನ್ನು ಕಡಿಮೆ ಮಾಡಲು , ಕಾರಣ ತಮ್ಮ ಮತ್ತು ಬೆಂಚ ಹಾಗೂ ಬಾರ್ ನಡುವಿನ ಸಹಕಾರದೊಂದಿಗೆ ಬರುವ ದಿನಗಳಲ್ಲಿ ತ್ವರಿತವಾಗಿ ನ್ಯಾಯ ದೊರಕಿಸುವ ಪ್ರಯತ್ನ ಮಾಡೊಣ ಎಂದರು
ಕೋನೆಯಲ್ಲಿ ವಕೀಲ ಸಂಘದ ಅದ್ಯಕ್ಷ ಕುರಬೇಟ ಮಾತನಾಡಿ ಇ ಹಿಂದಿನಂತೆ ನೂತನ ನ್ಯಾಯಾಧೀಶರಿಗೆ ನಮ್ಮ ಸಂಘದ ಸಂಪೂರ್ಣ ಬೆಂಬಲ ನೀಡಲಾಗುವದು ಹಾಗೂ ಲೋಕ ಅದಾಲತ್ ಗಳಲ್ಲಿ ಹೇಚ್ಚಿನ ಪ್ರಕರಣಗಳು ಇತ್ಯರ್ಥಕ್ಕೆ ಪ್ರಯತ್ನಿಸಲಾಗುವದು ಎಂದರು .
ಈ ಸಂದರ್ಭದಲ್ಲಿ ಹುಕ್ಕೇರಿ, ಸಂಕೇಶ್ವರ ಹಿರಿಯ, ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ