ಏ.11 ಮತ್ತು 12 ರಂದು ರಾಜ್ಯಮಟ್ಟದ ಕರಾಟೆ ಸ್ಪರ್ಧೆ…
ಇಂದು ಬೆಳಗಾವಿಯಲ್ಲಿ ಕರಾಟೆಪಟುಗಳ ಆಯ್ಕೆ ಪ್ರಕ್ರಿಯೆ…
ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗಾಗಿ ಬೆಳಗಾವಿಯಲ್ಲಿ 10ನೇ ಆಫೀಷಿಯಲ್ ಬುಲೆಟಿನ್ ಸಬ್ ಜ್ಯುನಿಯರ್ ಕರಾಟೆ ಸ್ಪರ್ಧಾಳುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಬೆಳಗಾವಿ ನಗರದ ಕ್ಯಾಂಪ್’ನಲ್ಲಿರುವ ಶಾನಭಾಗ ಸಭಾಗೃಹದಲ್ಲಿ ಬೆಳಗಾವಿ ಜಿಲ್ಲಾ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನನ ವತಿಯಿಂದ 14 ವರ್ಷದೊಳಗಿನ ಕರಾಟೆ ಪಟುಗಳನ್ನು ರಾಜ್ಯಮಟ್ಟದ ಕರಾಟೆ ಸ್ಪರ್ಧೆಗಾಗಿ ಆಯ್ಕೆ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿನಗರ, ಗ್ರಾಮೀಣ, ಖಾನಾಪೂರ, ಅಥಣಿ ಮತ್ತು ಗೋಕಾಕ ಸೇರಿದಂತೆ ವಿವಿಧೆಡೆಯಿಂದ ಸುಮಾರು 182 ಕರಾಟೆ ಪಟುಗಳು ಇದರಲ್ಲಿ ಭಾಗವಹಿಸಿದ್ದರು.
ಈ ವೇಳೆ ಬೆಳಗಾವಿ ಜಿಲ್ಲಾ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನನ ಅಧ್ಯಕ್ಷ ಗಜೇಂದ್ರ ಕಾಕತಿಕರ ಅವರು ಕರಾಟೆಯೂ ಆತ್ಮಸ್ಥೈರ್ಯ ಮತ್ತು ಆತ್ಮಬಲವನ್ನು ಹೆಚ್ಚಿಸುವ ಕಲೆಯಾಗಿದೆ. ಈಗ ಸರ್ಕಾರ ಕೂಡ ಕ್ರೀಡಾ ಕೋಟಾದಲ್ಲಿ ಕರಾಟೆ ಪಟುಗಳಿಗೆ ನೌಕರಿಯನ್ನು ಸಹ ನೀಡುತ್ತಿದೆ. ಆದ್ದರಿಂದ ಕರಾಟೆಯೆಡೆ ಜನರ ಒಲವು ಹೆಚ್ಚಾಗಿದೆ ಎಂದರು ತಿಳಿಸಿದರು.
ಇನ್ನು ಕರಾಟೆ ಈಗೀನ ಕಾಲಕ್ಕೆ ಅನಿವಾರ್ಯವಾಗಿದೆ. ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳಿಗೂ ಕರಾಟೆಯನ್ನು ಕಲಿಸುವುದು ಬಹುಮುಖ್ಯವಾಗಿದೆ. ಕರಾಟೆಯೂ ಆತ್ಮರಕ್ಷಣೆಯನ್ನು ಕಲಿಸುವುದರೊಡನೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕಲೆಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಕರಾಟೆ ಕಲಿಸಲು ಮುಂದಾಗಬೇಕೆಂದು ದಿವ್ಯಾ ನಾಡಗೌಡ ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನನ ಕಾರ್ಯದರ್ಶಿ ಜೀತೇಂದ್ರ ಕಾಕತಿಕರ ಅವರು ಏಪ್ರೀಲ್ 11 ಮತ್ತು 12 ರಂದು ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಇದರಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದು ಹೆಚ್ಚಿನ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಭಾಕರ ಕಿಲ್ಲೇಕರ, ಪರಶುರಾಮ ಕಾಕತಿ, ಅಕ್ಷಯ ಪರಮೋಜಿ, ಹರೀಶ್ ಸೋನಾರ್, ನತಾಶಾ ಅಷ್ಟೇಕರ, ವಿಠ್ಠಲ ಭೋಜಗಾರ, ಸಂಜು ಗಸ್ತಿ, ಅಮೀತ್ ವೇಸನೆ, ಚಂದನ ಜೋಷಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7