Breaking News

2025ರ ಮೊದಲ ಸೂರ್ಯಗ್ರಹಣ

Spread the love

2025ರ ಮೊದಲ ಸೂರ್ಯಗ್ರಹಣ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ (Amavasya) ದಿನವಾದ ಇಂದು ಸಂಭವಿಸಲಿದೆ.ಭಾಗಶಃ ಸೂರ್ಯಗ್ರಹಣ
ಮಾರ್ಚ್​ 29: ಇಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಖಗೋಳ ಶಾಸ್ತ್ರದಲ್ಲಿ ಇದೊಂದು ಪ್ರಕ್ರಿಯೆ ಮಾತ್ರ. ಆದರೆ ಧರ್ಮಗ್ರಂಥಗಳಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವ ಇದೆ. ಸೂರ್ಯ, ಚಂದರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭೂಮಿಯ ಕೆಲ ಭಾಗಗಳಲ್ಲಿ ಕತ್ತಲೆ ಆವರಿಸಲಿದೆ. 2025ರ ಮೊದಲ ಸೂರ್ಯಗ್ರಹಣ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ (Amavasya) ದಿನವಾದ ಇಂದು ಸಂಭವಿಸಲಿದೆ.
ಭಾಗಶಃ ಸೂರ್ಯಗ್ರಹಣ ಎಂದರೇನು?
ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಹಾದುಹೋದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಒಂದು ಭಾಗ ಮಾತ್ರ ಆವರಿಸುತ್ತದೆ. ಆಗ ಆಕಾಶದಲ್ಲಿ ಭಾಗಶಃ ಸೂರ್ಯನನ್ನು ಕಾಣಬಹುದಾಗಿದೆ. ಸೂರ್ಯನ ಉಳಿದ ಭಾಗ ಕತ್ತಲೆಯಿಂದ ಆವರಿಸಿರುತ್ತದೆ.
ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ?
ಇಂದು ಮಧ್ಯಾಹ್ನ 2.21ರಿಂದ ಸಂಜೆ 6.14ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈಶಾನ್ಯ ಅಮೆರಿಕ ಹಾಗೂ ಕೆನಡಾದ ಕೆಲ ಭಾಗಗಳಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ನ್ಯೂಯಾರ್ಕ್ ನಗರ, ಬೋಸ್ಟನ್, ಮಾಂಟ್ರಿಯಲ್ ಮತ್ತು ಕ್ವಿಬೆಕ್‌, ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಸಹ ಭಾಗಶಃ ಗ್ರಹಣ ಗೋಚರವಾಗಲಿದೆ.
ಎರಡು ಗಂಟೆಗಳ ಕಾಲ ಈ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಇಂದಿನ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಇಂದು ಯಾವುದೇ ಮುನ್ನೆಚ್ಚರಿಕೆ ಅಥವಾ ಪರಿಹಾರಗಳನ್ನು ಮಾಡುವ ಅಗತ್ಯವಿಲ್ಲ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡುವಂತೆ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸಬಾರದು. ಇದರಿಂದ ರೆಟಿನಾ ಸುಟ್ಟುಹೋಗುದಲ್ಲದೇ ಕಣ್ಣಿನ ಹಾನಿಗೆ ಕಾರಣವಾಗಬಹುದು. ಸೂರ್ಯಗ್ರಹಣವನ್ನು ನೋಡುವುದಾದರೆ ಮೊದಲು ಕಣ್ಣಿನ ರಕ್ಷಣೆ ಅಗತ್ಯವಾಗಿದೆ. ಸಾಮಾನ್ಯವಾಗಿ ಸನ್​ ಗ್ಲಾಸ್, ಕಲರ್​ ಪ್ಲಾಸ್ಟಿಕ್​ಗಳು, ಎಕ್ಸ್​​ ರೇಗಳಿಂದ ಅಥವಾ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡ ಅನುಸರಿಸುವ ಸೌರ ವೀಕ್ಷಕಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡಬಹುದಾಗಿದೆ.
ಯುಗಾದಿಗೂ ಒಂದು ದಿನ ಮೊದಲು ಸೂರ್ಯಗ್ರಹಣವಾಗಲಿದ್ದು, ಭಾರತದಲ್ಲಿ ಗೋಚರಿಸದಿದ್ದರೂ, ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ. ಈ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳು ನಡೆಯಲಿದ್ದು, ಮಾರ್ಚ್ 14ರಂದು ಪೂರ್ಣ ಚಂದ್ರಗ್ರಹಣ ಸಂಭವಿಸಿದರೆ, ಇಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಇನ್ನು ಮತ್ತೊಂದು ಬಾರಿ ಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಬಳಿಕ ಸೆಪ್ಟೆಂಬರ್ 21ರಂದು ಭಾಗಶಃ ಸೂರ್ಯಗ್ರಹಣ ಕೂಡ ಈ ವರ್ಷವೇ ಸಂಭವಿಸಲಿದೆ.

Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ