ಕಲಬುರಗಿ: ಆರ್‌ಟಿಐ ಕಾರ್ಯಕರ್ತನ ಹೆಸರನ್ನು ಬ್ಲ್ಯಾಕ್ಲಿಸ್ಟ್ನಿಂದ ತೆಗೆಯಲು ಎರಡು ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ಆರ್‌ಟಿಐ ಆಯುಕ್ತರೊಬ್ಬರು ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಮೊದಲ ಪ್ರಕರಣ ಇದಾಗಿದೆ. ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಕಲಬುರಗಿ ಪೀಠದ ಆರ್‌ಟಿಐ ಆಯುಕ್ತ ರವೀಂದ್ರ ಗುರುನಾಥ್ ಡಕಪ್ಪ ಅವರು ಆರ್‌ಟಿಐ ಕಾರ್ಯಕರ್ತ ಸಾಯಿಬಣ್ಣ ಸಸಿ ಬೆನಕನಹಳ್ಳಿ ಅವರ ಹೆಸರನ್ನು ಕಪ್ಪುಪಟ್ಟಿಯಿಂದ ತೆಗೆಯಲು 3 ಲಕ್ಷ ರೂಪಾಯಿ ಹಣ್ಕಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅನಗತ್ಯ ಮತ್ತು ಅಪ್ರಸ್ತುತ ಮಾಹಿತಿಯನ್ನು ಕೋರಿದ್ದ ಆರೋಪದ ಮೇಲೆ ಸಾಯಿಬಣ್ಣ ಅವರನ್ನು ಆರ್‌ಟಿಐ ಕಪ್ಪುಪಟ್ಟಿಗೆ ಸೇರಿಸಿತ್ತು.