ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕ ಶಹಾಪೂರದ ಇಫ್ತಾರ್ ಕೂಟ…
ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕ
ಶಹಾಪೂರದಲ್ಲಿ ಈಫ್ತಾರ ಕೂಟ
ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆ
ಹಿಂದೂ ಬಾಂಧವರು ಈಫ್ತಾರಕೂಟದಲ್ಲಿ ಭಾಗಿ
ನವಿ ಗಲ್ಲಿ , ಶಹಾಪೂರ ಬೆಳಗಾವಿಯ ಮುಸ್ಲಿಂ ಜಮಾತನ ವತಿಯಿಂದ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ರಮಜಾನ್ ಹಬ್ಬದ ನಿಮಿತ್ಯ ಈಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ಶಹಾಪೂರದಲ್ಲಿ ಪ್ರತಿ ವರ್ಷ ನಡೆಯುವ ಈಫ್ತಾರ್ ಕೂಟವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ.
ನವಿ ಗಲ್ಲಿ , ಶಹಾಪೂರ ಬೆಳಗಾವಿಯ ಮುಸ್ಲಿಂ ಜಮಾತನ ವತಿಯಿಂದ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ರಮಜಾನ್ ಹಬ್ಬದ ನಿಮಿತ್ಯ ಈಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಅಮಜದ್ ಮೋಮಿನ್ ಅವರ ನೇತೃತ್ವದಲ್ಲಿ ನಡೆದ ಈ ಈಫ್ತಾರ್ ಕೂಟದಲ್ಲಿ ಶಹಾಪೂರ ಠಾಣೆಯ ಸಿಪಿಐ ಸಿಮಾನಿ, ಮಾಜಿ ಮಹಾಪೌರ ನೇತಾಜೀರಾವ್ ಜಾಧವ್, ಸತೀಶ್ ಪಾಟೀಲ್, ಮಹಾದೇವ ಪಾಟೀಲ್, ರವಿ ಶಿಂಧೆ, ಪಿ.ಎಸ್.ಐ ಮಣಿಕಂಠ ಪುಜೇರಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
ಈ ವೇಳೆ ಮಾತನಾಡಿದ ಸತೀಶ ಪಾಟೀಲ್ ಅವರು ಪ್ರತಿಬಾರಿಯೂ ಹಿಂದೂ-ಮುಸ್ಲಿಂ ಬಾಂಧವರು ಏಕತೆಯಿಂದ ಅದ್ಧೂರಿಯಾಗಿ ಈಫ್ತಿಯಾರ್ ಪಾರ್ಟಿಯನ್ನು ಆಚರಿಸಲಾಗುತ್ತದೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಬೆಳಗಾವಿಯ ಶಹಾಪೂರ ಭಾಗದಲ್ಲಿ ಎಲ್ಲ ಹಬ್ಬ-ಹುಣ್ಣಿಮೆಗಳನ್ನು ಒಂದುಗೂಡಿ ಆಚರಿಸುತ್ತೇವೆ. ಪರಸ್ಪರ ಹಬ್ಬಗಳಿಗೆ ಹಿಂದೂ ಮುಸ್ಲಿಂ ಬಾಂಧವರು ಕರೆಯುತ್ತಾರೆ. ಶಾಂತಿಯುತವಾಗಿ ಎಲ್ಲ ಹಬ್ಬ ಉತ್ಸವಗಳನ್ನು ಆಚರಿಸಲಾಗುತ್ತದೆ ಎಂದರು.
ಇನ್ನು ಬೆಳಗಾವಿಯ ಶಹಾಪೂರ ಭಾಗದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲ ಹಬ್ಬ ಉತ್ಸವಗಳನ್ನು ಒಗ್ಗಟ್ಟಿನಿಂದ ಆಚರಿಸಲಾಗುತ್ತದೆ. ಮುಸ್ಲಿಂ ಬಾಂಧವರು ಇಲ್ಲಿನ ಪಂಚ ಮಂಡಳಿ ಮತ್ತು ಹಿಂದೂ ಬಾಂಧವರನ್ನು ಈಫ್ತಾರ ಪಾರ್ಟಿಗೆ ಆಮಂತ್ರಿಸುತ್ತಾರೆ. ಗಣೇಶೋತ್ಸವವಾಗಲಿ, ರಮಜಾನ್ ಹಬ್ಬವಾಗಲಿ ಹಿಂದೂ ಮುಸ್ಲಿಂ ಬಾಂಧವರು ಕೂಡಿ ಆಚರಿಸುತ್ತಾರೆ. ಇದು ಶಾಂತತೆ ಮತ್ತು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಮಹಾದೇವ ಪಾಟೀಲ್ ತಿಳಿಸಿದರು.
ಬೆಳಗಾವಿಯ ಶಹಾಪೂರದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತ ಎಂಬುದು ಸಾಭೀತಾಗುವಂತೆ ಹಿಂದೂ ಮತ್ತು ಮುಸ್ಲಿಂ ಬಾಂಧವರ ಏಕತೆಯನ್ನು ಕಾಣಬಹುದಾಗಿದೆ. ಖಾಸಬಾಗ, ನವಿ ಗಲ್ಲಿ, ಶಹಾಪೂರದ ಸಮಾಜ ಬಾಂಧವರ ಏಕತೆಯ ಸಂದೇಶ ಎಲ್ಲರ ವರೆಗೂ ಮುಟ್ಟಬೇಕಾಗಿದೆ ಎಂದು ಅಶ್ಫಾಕ್ ಘೋರಿ ತಿಳಿಸಿದರು. ಬೈಟ್
ಕಾರ್ಯಕ್ರಮದ ಯಶಸ್ವಿಗೆ ಅಶ್ಫಾಕ್ ಘೋರಿ, ಅಬ್ದುಲ್ ಬಾಗಲಕೋಟಿ, ಸಾಧಿಕ್ ಕೋತ್ವಾಲ್, ಝಾಕೀರ್ ಕಣಬರ್ಗಿ, ಝಹೂರ್ ಕಣಬರ್ಗಿ, ಜಾವೀದ್ ಮೋಮಿನ್, ಹಮೀದ್ ಬಾಗಲಕೋಟಿ, ಹಮಜಾ ಮಿರ್ಜಾ ಸೇರಿದಂತೆ ಇನ್ನುಳಿದವರು ಶ್ರಮಿಸಿದರು
Laxmi News 24×7