ಬೆಳಗಾವಿ: ಲವ್ ಜಿಹಾದ್ ಆರೋಪದ ಹಿನ್ನೆಲೆ ಯುವಕನಿಗೆ ಗೂಸಾ ನೀಡಿ ನೈತಿಕ ಪೊಲೀಸಗಿರಿ ತೋರಿಸಿದ ಹಿನ್ನೆಲೆ ನಾಲ್ವರನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಸಾಂವಗಾಂವ ಗ್ರಾಮದ ಜಮೀನೊಂದರಲ್ಲಿ ತನ್ನ ಸ್ನೇಹಿತೆ ಜೊತೆಗೆ ಜಮೀನಿನಲ್ಲಿ ಮಾತನಾಡುತ್ತ ಕುಳಿತಿದ್ದ ಯುವಕ ಮತ್ತು ಯುವತಿಯರನ್ನು ವಿಚಾರಿಸಿದಾಗ, ಯುವಕ ಡಿ ಫಾರ್ಮಸಿ ವಿದ್ಯಾರ್ಥಿ ಅಲ್ಲಾವುದ್ದೀನ್ ಪೀರಜಾದೆ ಮತ್ತು ಯುವತಿ ಹಿಂದೂ ಎಂದು ಗೊತ್ತಾದ ಹಿನ್ನೆಲೆ ಸಾಂವಗಾವ್ ಗ್ರಾಮದ ಸುದೇಶ ಪಾಟೀಲ, ಸಂತೋಷ ಜಾಧವ್, ಅನಗೋಳದ ನಿವಾಸಿಗಳಾದ ಜೈ ಇಂಜಲ್ ಮತ್ತು ಸುಮಿತ್ ಮೋರೆ ಅವರು ಅಲ್ಲಾವುದ್ದೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ತೋರಿದ ನಾಲ್ವರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.