Breaking News

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಹರಿಹರ ಪೀಠದ ವಚನಾನಂದ ಶ್ರೀ

Spread the love

ಬೆಳಗಾವಿ: ಕಾರು ಅಪಘಾತದಲ್ಲಿ ನಮ್ಮ ಸಮುದಾಯದ ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಾಯಗೊಂಡಿರುವುದು ನಮಗೆಲ್ಲ ಬಹಳ ಆಘಾತ ತಂದಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸ್ವಾಮೀಜಿ ಮಾಧ್ಯಮಗಳ ಜೊತೆಗೆ ಮಾತನಾಡಿದರು. ನಾನು ಹರ ಜಾತ್ರೆಯಲ್ಲಿ ಇರುವುದರಿಂದ ತಡವಾಗಿ ಮಾಹಿತಿ ಬಂತು. ಇವತ್ತು ಬೆಳಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಳ ಆರೋಗ್ಯವಾಗಿದ್ದಾರೆ. ಅವರ ಜೊತೆಗೆ ಕೆಲ ನಿಮಿಷ ಮಾತನಾಡಿರುವೆ. ಅವರ ಧೈರ್ಯ, ಸ್ಥೈರ್ಯವನ್ನು ಮೆಚ್ಚಬೇಕು. ಅವರ ಮುಖದಲ್ಲಿ ಯಾವುದೇ ರೀತಿಯ ಅಪಘಾತದ ಭಾವನೆಗಳು ಇಲ್ಲ. ಅವರಲ್ಲಿ ಅದಮ್ಯ, ಧೀಮಂತ ಶಕ್ತಿ ಇದೆ. ಬೇಗ ಗುಣಮುಖ ಆಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ, ಜನಸೇವೆಯಲ್ಲಿ‌ ಮತ್ತೆ ಕ್ರೀಯಾಶೀಲವಾಗಲಿ ಎಂದು ಆಶೀರ್ವಾದ ಮಾಡಿದ್ದೇನೆ ಎಂದು‌ ವಚನಾನಂದ ಸ್ವಾಮೀಜಿ ಹೇಳಿದರು.

ಅಪಘಾತದಿಂದ ನಮಗೆ ಬಹಳ ಖೇದ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೇಕಿರುವುದು ಚಿಕಿತ್ಸೆಯಲ್ಲ, ವಿಶ್ರಾಂತಿ. ಹರ ಮತ್ತು ಚೆನ್ನಮ್ಮನ ಆಶೀರ್ವಾದದಿಂದ ಅವರಿಗೆ ಗಂಭೀರ ಗಾಯವಾಗಿಲ್ಲ. ಆದರೆ, ಒಂದು ತಿಂಗಳು ಸರಿಯಾದ ಬೆಡ್ ರೆಸ್ಟ್ ಬೇಕಿದೆ. ವೈದ್ಯರು ಹೇಳಿದ ಹಾಗೆ ಹೆಬ್ಬಾಳ್ಕರ್​​ ಅವರು ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ