ಸದ್ಯ ಸಂಪುಟ ವಿಸ್ತರಣೆ ಕುರಿತು ಯಾವುದೇ ವಿಚಾರವಿಲ್ಲ
ಸದ್ಯ ಸಂಪುಟ ವಿಸ್ತರಣೆ ಕುರಿತು ಯಾವುದೇ ವಿಚಾರವಿಲ್ಲ. ಒಂದೇ ಒಂದು ಸ್ಥಾನ ಖಾಲಿ ಇದ್ದು ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆ ಸದ್ಯ ಉದ್ಭವವಾಗಿಲ್ಲ. ಕೇವಲ ಒಂದೇ ಒಂದು ಸ್ಥಾನ ಖಾಲಿ ಇದೆ. ಈ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದರು. Byte
ಇನ್ನು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಎ ಐ ಸಿ ಸಿ ಅಧಿವೇಶನಕ್ಕೆ 100 ವರ್ಷ ಪೂರೈಕೆ ಹಿನ್ನೆಲೆ ಸಿಎಂ ಜೊತೆ ಚರ್ಚಿಸಿ ನಾಯಕರನ್ನು ಬೆಳಗಾವಿಗೆ ಆಮಂತ್ರಿಸುವ ಕುರಿತು ಮಾತ್ರ ಚರ್ಚಿಸಿರುವುದಾಗಿ ತಿಳಿಸಿದರು.
ಇನ್ನು ದೆಹಲಿ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ವನ್ಯಜೀವಿ ಮಹಾಮಂಡಲದ ಕುರಿತು ಸಚಿವರನ್ನು ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ನೀರಾವರಿ ಇಲಾಖೆಯ ಕುರಿತು ಪಿ ಎಂ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು