Breaking News

ನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!

Spread the love

ನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!

ವದೆಹಲಿ: ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಈ ಆಫ್ ಸ್ಪಿನ್ನರ್​ ಟೆಸ್ಟ್​ ಸ್ವರೂಪದಲ್ಲಿ 800 ವಿಕೆಟ್ ಪಡೆದಿರುವುದು ವಿಶ್ವದಾಖಲೆಯಾಗಿದೆ. ಈ ದಾಖಲೆಯನ್ನು ಯಾವುದೇ ಬೌಲರ್​ನಿಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಮುರಳೀಧರನ್​, ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

 

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಮುರಳೀಧರನ್​, ಸದ್ಯ ಎಲ್ಲರೂ ಟಿ20 ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದಾರೆ. ಹಾಗಾಗಿ ನನ್ನ ದಾಖಲೆ ಸೇಫ್​ ಆಗಿದೆ. ಯಾರೂ ಕೂಡ ನನ್ನ ದಾಖಲೆ ಹತ್ತಿರ ಕೂಡ ಸುಳಿಯುವುದಿಲ್ಲ ಎಂದರು. ಹಲವು ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್ ನೋಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು. ಟೆಸ್ಟ್​ ಪಂದ್ಯಗಳ ಸಂಖ್ಯೆ ಕಡಿಮೆಯಾಗಲಿದ್ದು, ಪ್ರತಿ ದೇಶವು ವರ್ಷದಲ್ಲಿ ಆರು ಅಥವಾ ಏಳು ಟೆಸ್ಟ್‌ಗಳನ್ನು ಮಾತ್ರ ಆಡುತ್ತವೆ ಎಂದರು.

ನಾನು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಆಟಗಾರರ ವೃತ್ತಿಜೀವನ 20 ವರ್ಷವಾಗಿತ್ತು ಆದರೆ, ಇಂದು ಆಟಗಾರರ ವೃತ್ತಿಜೀವನ ಬಹಳ ಕಡಿಮೆಯಾಗಿದೆ. ಟೆಸ್ಟ್​ ಸ್ವರೂಪದಲ್ಲಿ 800 ವಿಕೆಟ್‌ಗಳ ನನ್ನ ದಾಖಲೆಯನ್ನು ಬೇರೆಯವರು ಮೀರಿಸುವುದು ತುಂಬಾ ಕಷ್ಟ ಎಂದು ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಮುತ್ತಯ್ಯ ಮುರಳೀಧರನ್ ಹೇಳಿದಂತೆ ಅವರ ದಾಖಲೆ ಮುರಿಯುವುದು ತುಂಬಾ ಕಷ್ಟ. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 530 ವಿಕೆಟ್ ಮತ್ತು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 516 ವಿಕೆಟ್ ಪಡೆದಿದ್ದಾರೆ. ಆದರೆ, ಲಿಯೋನ್​ಗೆ 36 ಮತ್ತು ಅಶ್ವಿನ್​ಗೆ 37 ವರ್ಷ. ಹೀಗಾಗಿ ಇಬ್ಬರೂ ನಿವೃತ್ತಿಯ ಸನಿಹದಲ್ಲಿದ್ದಾರೆ. ಆದ್ದರಿಂದ ಮುರಳೀಧರನ್ ಅವರ ದಾಖಲೆಯನ್ನು ಮುರಿಯುವುದು ಇಬ್ಬರಿಗೂ ತುಂಬಾ ಕಷ್ಟ.

ಇನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಕಾಗಿಸೊ ರಬಾಡಾ 30 ವರ್ಷದೊಳಗಿನ ಬೌಲರ್‌ಗಳಲ್ಲಿ 299 ವಿಕೆಟ್‌ಗಳನ್ನು ಹೊಂದಿದ್ದಾರೆ. ಆದರೆ, ಗಾಯದ ಸಮಸ್ಯೆಯಿಂದ ಬಳಲದೆ ಹಲವು ವರ್ಷಗಳ ಕಾಲ ಪಂದ್ಯಗಳನ್ನು ಆಡುತ್ತಾರೆಯೇ ಎಂದು ಹೇಳುವುದು ಕಷ್ಟ. ಅದೇ ಸಮಯದಲ್ಲಿ ಟಿ20 ಕ್ರಿಕೆಟ್‌ನೊಂದಿಗೆ ಫ್ರಾಂಚೈಸಿ ಕ್ರಿಕೆಟ್ ಆಡುತ್ತಿರುವುದರಿಂದ ಆಟಗಾರರು ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಬಾಡಾಗೂ ಮುರಳೀಧರನ್​ ದಾಖಲೆ ಮುರಿಯುವುದು ಕಷ್ಟ. ಹಾಗಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮುರಳೀಧರನ್​ ಎಂದೆಂದಿಗೂ ನಂಬರ್​ 1 ಬೌಲರ್​ ಆಗಿಯೇ ಇರುತ್ತಾರೆ. 


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ