ಬೆಂಗಳೂರು ಆಗಸ್ಟ್ 13: ಬೆಂಗಳೂರು ಅಂದರೆ ಟ್ರಾಫಿಕ್ ಜಾಮ್. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಬೇಕಾದರೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ. ಈ ನಡುವೆ ಅಪಘಾತಗಳು ಸಂಭವಿಸಿದರೆ ಮುಗಿತು ಜನ ತಾವಂದುಕೊಂಡ ಸ್ಥಳಕ್ಕೆ ಹೋಗುವುದು ಗಂಟೆಗಳವರೆಗೆ ತಡವಾಯಿತು ಅಂತಲೇ ಅರ್ಥ.
ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಅಪಘಾತವೊಂದು ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ ಸಂಭವಿಸಿದ್ದು ಆಕ್ಸಿಡೆಂಟ್‌ನ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ನಿನ್ನೆ ಬೆಳಿಗ್ಗೆ 9-25ಕ್ಕೆ ಹೆಬ್ಬಾಳ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ಏರ್ಪೋರ್ಟ್ ನಿಂದ ಎಚ್‌ಎಸ್‌ಆರ್ ಲೇಔಟ್ ಕಡೆ ಸಂಚಾರ ಮಾಡ್ತಿದ್ದ ಬಸ್ ಏಕಾಏಕಿ ಮುಂಬದಿ ವಾಹನ ಸವಾರರ ಮೇಲೆ ನುಗ್ಗಿದೆ. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಈ ದುರ್ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಬಿಎಂಟಿಸಿ ಚಾಲಕ ರಾಜ ಕುಮಾರ್ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿದ್ದಾನೆ. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ಎಂದು ಗುರುತಿಸಲಾಗಿದೆ. ಇದರಿಂದ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
A bus driver lost control on the Hebbal Flyover, #Bengaluru crashing into multiple vehicles. Two people were injured, with one hospitalized.pic.twitter.com/Jcn4ugb268
— Nishkama_Karma (@Nishkama_Karma1) August 13, 2024
ಬಸ್ ಗುದಿದ್ದರಿಂದ ನಡುರೋಡಲ್ಲಿ ವಾಹನ ಸವಾರರು ಕಿರುಚಿ ಕೂಗಾಡಿದ್ದಾರೆ. ಚೂರು ಹೆಚ್ಚು ಕಮ್ಮಿ ಆಗಿದ್ರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.