Breaking News
Home / Uncategorized / ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು

ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು

Spread the love

ತೆಲಸಂಗ: ರಸ್ತೆಗಳ ಬದಿಗಳಲ್ಲಿ ಅಳವಡಿಸುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ಮಾರ್ಗಸೂಚಿಯಾಗಿರಬೇಕು. ಆದರೆ ಅಥಣಿ ತಾಲೂಕಿನ ಕಕಮರಿಯಿಂದ ತೆಲಸಂಗ ಸಾವಳಗಿವರೆಗೆ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಎಸ್‌.ಎಚ್‌ 260 ರಸ್ತೆ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಕಿ.ಮೀ ಮಾರ್ಗಸೂಚಿ ಫಲಕಗಳು ಪ್ರಯಾಣಿಕರಿಗೆ ದಾರಿ ತಪ್ಪಿಸುತ್ತಿವೆ.

ತೆಲಸಂಗ: ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು

ಫಲಕಗಳಲ್ಲಿ ಕಿ.ಮೀ. ಲೋಪದೋಷಗಳಾಗಿವೆ. ಹಾಲಳ್ಳಿ ಮಾರ್ಗದಿಂದ ತೆಲಸಂಗ ಕ್ರಾಸ್‌ ರಸ್ತೆ ದಾಟುವ ಮುನ್ನ ಹಾಕಿರುವ ಫಲಕದಲ್ಲಿ ತೆಲಸಂಗ 2 ಕಿ.ಮೀ. ಬರೆಯುವ ಬದಲು 3 ಕಿ.ಮೀ ಅಂತ ಬರೆಯಲಾಗಿದೆ. ಆಶ್ಚರ್ಯವೆಂದರೆ ನಾಲ್ಕು ಹೆಜ್ಜೆ ಅಂತರದಲ್ಲಿಯೇ ರಸ್ತೆ ಕ್ರಾಸ್‌ ಮಾಡಿದ ನಂತರ ಇನ್ನೊಂದು ಫಲಕದಲ್ಲಿ ತೆಲಸಂಗ 4 ಕಿ.ಮೀ ಅಂತ ಫಲಕದಲ್ಲಿದೆ. ಅಲ್ಲದೇ ಈ ನೂತನ ಫಲಕದ ಪಕ್ಕದಲ್ಲೇ ಹಳೇ ಕಲ್ಲಿನ ಫಲಕದಲ್ಲಿ ತೆಲಸಂಗ 2 ಕಿ.ಮೀ ಅಂತ ಸ್ಪಷ್ಟವಾಗಿ ಬರೆದಿದ್ದರೂ 3 ಕಿ.ಮೀ, 4
ಕಿ.ಮೀ ಅಂತ ತಪ್ಪಾದ ಫಲಕ ಹಾಕಿ ಗೊಂದಲ ಸೃಷ್ಟಿಸಲಾಗಿದೆ.

ತೆಲಸಂಗ ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲೂ ತಪ್ಪು ಫಲಕ ಹಾಕಲಾಗಿದೆ. 4 ಕಿ.ಮೀ ಅಂತರದ ಕನ್ನಾಳ ಗ್ರಾಮಕ್ಕೆ 6.5 ಕಿ.ಮೀ ಅಂತ, 10 ಕಿ.ಮೀ ಅಂತರದ ಕಕಮರಿ ಗ್ರಾಮಕ್ಕೆ 13 ಕಿ.ಮೀ ಅಂತ ಹಾಕಲಾಗಿದೆ. ಫಲಕ ಹಾಕಿ 8 ತಿಂಗಳ ಕಳೆದರೂ ಫಲಕ ತಪ್ಪೆಂದು ಗೊತ್ತಾಗದ ಅಧಿಕಾರಿಗಳ

ವರ್ತನೆಗೆ ಜನ ಬೇಸತ್ತಿದ್ದಾರೆ. ಕಕಮರಿಯಿಂದ ತೆಲಸಂಗ ಮಾರ್ಗಕ್ಕೆ ಕಕಮರಿಯಲ್ಲಿ ಅಳವಡಿಸಿರುವ ಫಲಕದಲ್ಲಿ ತೆಲಸಂಗ 10 ಕಿ.ಮೀ ಅಂತ ಸರಿಯಾಗಿಯೇ ಇದೆ. ಈ ಫಲಕದೊಂದಿಗೆ ಅಳವಡಿಸಿರುವ ಇನ್ನುಳಿದ ಫಲಕಗಳಲ್ಲಿ ತಪ್ಪಾಗಿ ನಮೂದಿಸಿ ಅಳವಡಿಸಿರುವ ಫಲಕಗಳಿಂದ ದೂರದ ಪ್ರಯಾಣಿಕರು ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ.

ಕುಸಿದ ರಸ್ತೆ: ತೆಲಸಂಗ ಕ್ರಾಸ್‌ದಿಂದ ಹಾಲಳ್ಳಿ ಮಾರ್ಗವಾಗಿ ಹೋಗುವ ಪೋಳ ಅವರ ತೋಟದ ಬಳಿ ಈ ನೂತನ ರಸ್ತೆ ಕುಸಿದಿದೆ. ಇದರಿಂದ ಜೋರಾಗಿ ಬಂದ್‌, ಬೈಕ್‌, ಕಾರ್‌ ಸೇರಿದಂತೆ ವಿವಿಧ ವಾಹನಗಳು ದಿಢೀರ್‌ ವೇಗದಲ್ಲಿ ಜಂಪ್‌ ಆಗಿ ಚಾಲಕನ ನಿಯಂತ್ರಣ ತಪ್ಪುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.


Spread the love

About Laxminews 24x7

Check Also

ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪ ಅನಂತರಾಜು ಆಗ್ರಹ

Spread the love ಗೌರಿಬಿದನೂರು: ದಲಿತರು ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲಿ ನಡೆಸಲು ಉದ್ದೇಶಿಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಸೂಕ್ತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ