ಬೆಳಗಾವಿ: ‘ದಾನ ಪಡೆಯುವ ಕೈಗಳು ಶುದ್ಧವಾಗಿದ್ದರೆ ಮಾತ್ರ ದಾನ ನೀಡುವ ಕೈಗಳು ಮುಂದೆ ಬರುತ್ತವೆ. ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸಂಸ್ಥೆ ವಿಶ್ವಮಟ್ಟಕ್ಕೆ ಬೆಳೆಯಲು ಇಂಥ ಶುದ್ಧ ಕೈಗಳೇ ಕಾರಣ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಂಸ್ಥೆಯ ಪರಿವಾರದವರು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬ್ರಿಟಿಷ್ ಆಡಳಿತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಏಳು ಶಿಕ್ಷಕರು ಸೇರಿ ಈ ಸಂಸ್ಥೆ ಕಟ್ಟಿದರು. ಸರ್ಕಾರದಲ್ಲಿ ದೊಡ್ಡ ಹುದ್ದೆ ಬಯಸದೇ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದರು. ಹಾಗಾಗಿ, ಅವರನ್ನು ಸಂಸ್ಥೆಯ ಸಪ್ತರ್ಷಿಗಳು ಎಂದು ಗೌರವಿಸುತ್ತೇವೆ. ಅವರೊಂದಿಗೆ ಸೇರಿದ ದಾನಿಗಳು ಸಂಸ್ಥೆ ಬೆಳೆಸಿದರು. ತಮ್ಮ ಆಸ್ತಿ, ಜೀವಿತಾವಧಿಯ ಗಳಿಕೆ ಎಲ್ಲವನ್ನೂ ದಾನ ಮಾಡಿದವರು ಹಲವರಿದ್ದಾರೆ’ ಎಂದು ನೆನೆದರು.
Laxmi News 24×7