ಬೆಳಗಾವಿ: ಆಹಾರ ಧಾನ್ಯ ಕಿಟ್ ವಿತರಿಸುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಇಂದು ಕೂಡ ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಜನ ಸೇರಿರುವ ದೃಶ್ಯ ಕಂಡು ಬಂತು.
ಇಲ್ಲಿನ ಚನ್ನಮ್ಮ ವೃತ್ತದಲ್ಲಿರುವ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಮಾಜಿಕ ಅಂತರ ಕಾಯ್ದುಕೊಳ್ಳದೇ, ಕನಿಷ್ಟ ಮಾಸ್ಕ್ ಕೂಡ ಧರಿಸಿರಲಿಲ್ಲ. ಸುಮಾರು ಐದು ಸಾವಿರ ಆಹಾರ ಧಾನ್ಯ ಕಿಟ್ ನೀಡಲಾಗುತ್ತಿದೆ ಎಂಬ ವದಂತಿ ಹಿನ್ನೆಲೆ ಜನ ಸೇರಿದ್ದರು ಎನ್ನಲಾಗುತ್ತಿದೆ. ಕಿಟ್ ಗಾಗಿ ಸೇರಿದ ಜನರನ್ನು ಪೊಲೀಸರು ಚದುರಿಸಿದರು.
ನಿನ್ನೆ ಬೆಳಗ್ಗೆಯಷ್ಟೇ ಕೆಲ ಹೆಸರು ನೋಂದಣಿ ಮಾಡಿದ ಜನರಿಗೆ ಆಹಾರ ಧಾನ್ಯ ಕಿಟ್ ಹಂಚಲಾಗಿತ್ತು. ಆದ್ರೆ ಮಧ್ಯಾಹ್ನದ ವೇಳೆಗೆ ಮತ್ತೆ ಸೇರಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇಂದು ಬೆಳಗ್ಗೆ ಮತ್ತೆ 5 ಸಾವಿರ ಜನರಿಗೆ ಕಿಟ್ ವಿತರಿಸಲಾಗುತ್ತಿದೆ ಎಂಬ ವದಂತಿ ಹಬ್ಬಿದ್ದು, ಕಚೇರಿ ಎದುರು ಜನರು ತಂಡೋಪ ತಂಡವಾಗಿ ಆಗಮಿಸಿ ಕಾಲಿ ಕೈಯಲ್ಲಿ ಮನೆಗೆ ತೆರಳುತ್ತಿದ್ದಾರೆ.