Breaking News

21 ದಿನಕ್ಕೆ 21 ಲಕ್ಷ ರೂ ಕರೆಂಟ್ ಬಿಲ್..

Spread the love

ಮೈಸೂರು: ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದಿಂದ ಇಡೀ ಮೈಸೂರನ್ನು ಝಗಮಗಿಸುವಂತೆ ಮಾಡಲಾಗಿತ್ತು. ಇದು ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ ಕರೆಂಟ್ ಬಿಲ್ ಬಂದಿದ್ದು. ಒಟ್ಟು 21 ದಿನಕ್ಕೆ 21 ಲಕ್ಷ ರೂಪಾಯಿ ವಿದ್ಯುತ್​​​​​ ವೆಚ್ಚವಾಗಿದೆ. ಇದು ಎಲ್ಲಾ ರಸ್ತೆಗಳು, ವೃತ್ತಗಳು, ಹಲವು ಕಲಾಕೃತಿಗಳ ದೀಪಾಲಂಕಾರ ಸೇರಿದಂತೆ ನಗರದ ದೀಪಾಲಂಕಾರಕ್ಕೆ ತಗುಲಿದೆ ಒಟ್ಟು ಖರ್ಚಾಗಿದೆ.

ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಟ್ಟು 1.45 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದ್ದು. ಈ ದೀಪಾಲಂಕಾರ ಹಲವು ಖಾಸಗಿ ಕಂಪನಿಗಳು ಸಹ ಪ್ರಾಯೋಜಕತ್ವ ಹೊಂದಿದೆ. ವಿವಿಧ ಖಾಸಗಿ ಕಂಪನಿಗಳ ಪ್ರಾಯೋಜಕತ್ವದಿಂದ ಸುಮಾರು 80 ಲಕ್ಷ ರೂಪಾಯಿಗಳು ಬಂದಿದೆ.

ಸತತ 21 ದಿನಗಳ ಝಗಮಗಿಸಿದ ದೀಪಾಲಂಕಾರ: ದಸರಾ ಹಿನ್ನೆಲೆ ನಗರದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ಸತತ 21 ದಿನಗಳ ಕಾಲ ರಾತ್ರಿ 7 ಗಂಟೆಯಿಂದ 11 ಗಂಟೆಯವರೆಗೆ ಇರುತ್ತಿತ್ತು. ಈ ದೀಪಾಲಂಕಾರವನ್ನು ನೋಡಲು ಪ್ರತಿನಿತ್ಯ ನಿರೀಕ್ಷೆಗೂ ಮೀರಿದ ಜನ ಸಾಗರವೇ ಹರಿದು ಬರುತ್ತಿತ್ತು. ದಸರಾ ಜಂಬೂಸವಾರಿ ಬಳಿಕ ನ.4 ರವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಹೇಳಿದ್ದ ಸೆಸ್ಕ್ ಅಧಿಕಾರಿಗಳು, ವಾರಾಂತ್ಯ ಭಾನುವಾರವಾಗಿದ್ದರಿಂದ ನವಂಬರ್ 5 ರವರೆಗೆ ದೀಪಾಲಂಕಾರವನ್ನು ವಿಸ್ತರಿಸಿದ್ದರು.

ಈ ದೀಪಾಲಂಕಾರವನ್ನು ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳು ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಮಾಡಲಾಗಿತ್ತು. ಒಟ್ಟು 6.15 ಕೋಟಿ ಅಂದಾಜು ವೆಚ್ಚವಾಗಿದ್ದು, ಸರ್ಕಾರಿ ಗ್ಯಾರಂಟಿ ಯೋಜನೆಗಳು, ಮೈಸೂರು ಮಹಾರಾಜರು, ಜಂಬೂಸವಾರಿ, ತಾಯಿ ಚಾಮುಂಡೇಶ್ವರಿ ಸೇರಿದಂತೆ ನಾನಾ ಕಲಾಕೃತಿಗಳನ್ನು ನಗರದ ಹಲವು ಕಡೆ ಮಾಡಲಾಗಿತ್ತು.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ