Breaking News

ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ

Spread the love

ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ ದಿನಾಂಕವನ್ನು ನಟ ರಕ್ಷಿತ್​ ಶೆಟ್ಟಿ ಬಹಿರಂಗಪಡಿಸಿದ್ದಾರೆ.

ರಕ್ಷಿತ್​​ ಶೆಟ್ಟಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ಏಳು ಬೀಳುಗಳನ್ನು ಎದುರಿಸಿ, ಪ್ರಸ್ತುತ ಸ್ಟಾರ್​ ನಟನಾಗಿ ಹೊರ ಹೊಮ್ಮಿದ್ದಾರೆ. ರಕ್ಷಿತ್​​ ಶೆಟ್ಟಿ ಮುಖ್ಯಭೂಮಿಕೆಯ ಬಹುತೇಕ ಸಿನಿಮಾಗಳು ಹಿಟ್ ಸಾಲಿಗೆ ಸೇರಿವೆ.

ಪ್ರತೀ ಸಿನಿಮಾಗಳು ಕೂಡ ಅದ್ಭುತ ಅಂತಾರೆ ಅಭಿಮಾನಿಗಳು. ಪ್ರತೀ ಪಾತ್ರಗಳಿಗೂ ಅಚ್ಚುಕಟ್ಟಾಗಿ ಜೀವ ತುಂಬೋ ಮುಖೇನ ಆ ಪಾತ್ರವನ್ನು, ಸಿನಿಮಾವನ್ನು ವಿಶೇಷವಾಗಿಸುತ್ತಾರೆ. ಕಥೆ ರವಾನಿಸುವ ಶೈಲಿಗೆ ಅಭಿಮಾನಿಗಳು ಮನಸೋಲುತ್ತಾರೆ. ಅದರಂತೆ, ಇತ್ತೀಚೆಗಷ್ಟೇ ಬಿಡುಡೆ ಆಗಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಸಿನಿಪ್ರಿಯನ್ನು, ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶ ಕಂಡಿವೆ..

 

 

ಮನು ಮತ್ತು ಪ್ರಿಯಾಳ ಪ್ರೇಮಕಥೆಯನ್ನು ಪ್ರೇಕ್ಷಕರೆದುರು ಅದ್ಭುತವಾಗಿ ಪ್ರದರ್ಶಿಸಿದ ಸಿನಿಮಾವೇ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’. SSESideA ಸಿನಿಮಾ ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶ ಕಂಡಿದೆ. ಸಿನಿಮಾ ವೀಕ್ಷಿಸಿದವರು ಪ್ರೇಮ ಪ್ರಪಂಚಕ್ಕೆ ಭೇಟಿ ಕೊಟ್ಟು ಬಂದಿದ್ದಾರೆ. ಚಿತ್ರ ಭಾವನಾತ್ಮಕವಾಗಿ ಪ್ರೇಕ್ಷಕರ ಮನ ಮುಟ್ಟಿದೆ. ಕನ್ನಡದಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾ ತೆಲುಗಿಗೂ ಡಬ್​ ಆಗಿ ಹೊರ ರಾಜ್ಯದವರ ಮನ ಗೆದ್ದಿದೆ. ಹೇಮಂತ್​ ಎಂ ರಾವ್ ನಿರ್ದೇಶನದ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಪಾತ್ರದಲ್ಲಿ ರಕ್ಷಿತ್​ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್​ ಕಾಣಿಸಿಕೊಂಡಿದ್ದು, ಸಿನಿಮಾ ಒಟಿಟಿಯಲ್ಲೂ ಲಭ್ಯವಿದೆ. ಇದೀಗ ಚಿತ್ರದ ಮತ್ತೊಂದು ಭಾಗ ಬಿಡುಗಡೆಗೆ ಸಜ್ಜಾಗುತ್ತಿದೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ ದಿನಾಂಕ: ರಕ್ಷಿತ್​ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಸಿನಿಮಾದ ಮತ್ತೊಂದು ವಿಶೇಷವೆಂದರೆ ಅತಿ ಕಡಿಮೆ ಅವಧಿಯಲ್ಲಿ ಚಿತ್ರದ ಮತ್ತೊಂದು ಭಾಗ ಬಿಡುಗಡೆ ಆಗುತ್ತಿರುವುದು. ಆದರೆ ಈಗಾಗಲೇ ಎರಡು ಬಾರಿ ರಿಲೀಸ್​ ಡೇಟ್​ನಲ್ಲಿ ಬದಲಾವಣೆ ಮಾಡಲಾಗಿದೆ. ಕಳೆದ ಸೆಪ್ಟೆಂಬರ್​ 1 ರಂದು ಪಾರ್ಟ್ 1 ಬಿಡುಗಡೆ ಆಗಿತ್ತು. ಅಕ್ಟೋಬರ್​ನಲ್ಲೇ ಸಿನಿಮಾ ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್​ 20 ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಬಳಿಕ ಅಕ್ಟೋಬರ್​ 27 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದೀಗ ಸಿನಿಮಾವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ನವೆಂಬರ್​ನಲ್ಲಿ ಪಾರ್ಟ್ ಬಿ ರಿಲಿಸ್​ ಆಗಲಿದೆ. ಅತೀ ಕಡಿಮೆ ಅವಧಿಯಲ್ಲಿ ಸೀಕ್ವೆಲ್​ ಬಿಡುಗಡೆ ಮಾಡುತ್ತಿರುವುದು ಬಹುಶಃ ಇದೇ ಮೊದಲು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ‘ನಮಾಮಿ ಗಂಗೆ’

Spread the love ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ‘ನಮಾಮಿ ಗಂಗೆ’ ವೈಜಯಂತಿ ಕಾಶಿ ಉಪಸ್ಥಿತಿಯಲ್ಲಿ ಶಾಂತಲಾ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಮನಮೋಹಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ