ಹುಬ್ಬಳ್ಳಿ: ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿಗಳ ಭೇಟಿಗಾಗಿ ಸುಮಾರು ಒಂದು ಗಂಟೆ ಕಾದರೂ ಭೇಟಿಯಾಗದ ಹಿನ್ನೆಲೆಯಲ್ಲಿ ವಾಪಸ್ಸು ತೆರಳಿದ ಘಟನೆ ನಡೆಯಿತು.
ಇಲ್ಲಿನ ಆದರ್ಶ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಶಾಸಕಿ ಕುಸುಮಾವತಿ ತೆರಳಿದ್ದರು.
ಸುಮಾರು ಒಂದು ಗಂಟೆ ಕಾಲ ಕಾದರು ಕುಳಿತರು. ಆದರೆ ಬೆಳಗಾವಿಗೆ ತೆರಳುವ ಭರದಲ್ಲಿ ಭೇಟಿಯಾಗದೆ ಸಿಎಂ ಬೊಮ್ಮಾಯಿ ಹೊರಟು ಹೋದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಕುಸುಮಾವತಿ ಶಿವಳ್ಳಿ, ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಆಗಮಿಸಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಆದರೆ ಮುಖ್ಯಮಂತ್ರಿಗಳು ಬೇರೆಡೆಗೆ ತುರ್ತಾಗಿ ಹೋಗುವುದರಿಂದ ಭೇಟಿಯಾಗಲಿಲ್ಲ. ಇನ್ನೊಮ್ಮೆ ಭೇಟಿಯಾಗುವುದಾಗಿ ಹೇಳಿ ಹೋದರು ಎಂದು ತಿಳಿಸಿದರು.
ಕುಂದಗೋಳ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ: ಯಾರು ಏನೇ ಮಾಡಿದರು ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ಕ್ಷೆತ್ರದಲ್ಲಿ ಯಾವುದೇ ಭಿನ್ನಮತವಿಲ್ಲ. ಭಿನ್ನಮತಕ್ಕಾಯೇ ಪ್ರಜಾಧ್ವನಿ ರದ್ದಾಗಿದೆ ಎಂಬುವುದು ಶುದ್ಧ ಸುಳ್ಳು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯದ ಅಭಾವದಿಂದ ಕಾರ್ಯಕ್ರಮ ರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.
Laxmi News 24×7