Breaking News

“ಮಹಾಪರಿನಿರ್ವಾಣ” ದಿನ ನಿಮಿತ್ಯ ಕೇ೦ದ್ರ ಕಾರಾಗೃಹದಲ್ಲಿ ಕಾರ್ಯಕ್ರಮ

Spread the love

 ಕೇ೦ದ್ರ ಕಾರಾಗೃಹ ಬೆಳಗಾವಿಯಲ್ಲಿ “ಮಾಹಾಪರಿನಿರ್ವಾಣ” ದಿನ ನಿಮಿತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರಾಗೃಹದ ಮುಖ್ಯ ಅಧಿಕ್ಷಕರಾದ ಶ್ರೀ ಕೃಷ್ಣಾ ಕುಮಾರ ಅವರು ಭಾರತರತ್ನ ಸ೦ವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ ಅ೦ಬೇಡ್ಕರರ ಭಾವಚಿತ್ರದ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಶ್ರೀ ಕೃಷ್ಣ ಕುಮಾರ ಮಾತನಾಡಿ ಡಾ|| ಬಿ. ಆರ್ ಅ೦ಬೇಡ್ಕರ ಅವರ ಪುಣ್ಯ ತಿಥಿಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ ಡಿಸೆ೦ಬರ ೦೬,೧೯೫೬ ರ೦ದು ಬಾಬಾಸಾಹೇಬರು ದೇಹತ್ಯಾಗ ಮಾಡಿದರು ಈ ದಿನವನ್ನು “ಮಹಾಪರಿನಿರ್ವಾಣ ದಿನ”ವನ್ನಾಗಿ ದೇಶದ ತು೦ಬೆಲ್ಲ ಆಚರಿಸುವ ಮೂಲಕ ಧೀಮ೦ತ ನಾಯಕನಿಗೆ ಗೌರವ ಸಲ್ಲಿಸಲಾಗುತ್ತಿದೆ ಎ೦ದು ಹೇಳಿದರು

ಡಾ|| ಅ೦ಬೇಡ್ಕರ ಭಾರತದ ಸ೦ವಿಧಾನ ಶಿಲ್ಪಿ ಮಾತ್ರವಲ್ಲದೆ ಪ್ರಸಿದ್ಧ ಸಮಾಜ ಸುಧಾರಕರು,ಅರ್ಥಶಾಸ್ತçಜ್ಞರು ದೀನ ದಲಿತರ ಬ೦ಧು ಪ್ರಸಿದ್ಧ ಕಾನೂನು ತಜ್ಞ ಹಾಗೂ ಅಸ್ಪೃಶ್ಯತೆಯ ವಿರುದ್ದ ದಿಟ್ಟತನದಿ೦ದ ಹೋರಾಡಿದ ಮಹಾನ್ ನಾಯಕ ಎ೦ದರು.

ಆಧುನಿಕ ಭಾರತ ರೂಪಿಸಿವಲ್ಲಿ ಡಾ|| ಬಾಬಾಸಾಹೇಬರ, ಪಾತ್ರ ಅತಿ ಮುಖ್ಯವಾದದ್ದು ತಾವು ಅನುಭವಿಸಿದ ತಾರತಮ್ಯ ಮು೦ದಿನ ಪೀಳಿಗೆ ಅನುಭವಿಸಬಾರದು ಎ೦ಬ ಉದ್ದೇಶದೋ೦ದಿಗೆ ಹೋರಾಡಿ ಸಮಾನತೆಯ ದನಿಯಾದ ಮಹಾನ್ ಮಾನವತಾವಾದಿ ಭಾರತದ ಪ್ರಥಮ ಕಾನೂನು ಮ೦ತ್ರಿಯಾಗಿದ್ದ ಅವರು ಜಗತ್ತಿನ ಅತಿದೊಡ್ಡ ಹಾಗೂ ಶ್ರೇಷ್ಟವಾದ ಲಿಖಿತ ಸ೦ವಿಧಾನವನ್ನು ರೂಪಿಸಿದರು ಅವರು ಸ್ವಾರ್ಥಕ್ಕಾಗಿ ಸಾಮಾಜಿಕ ನ್ಯಾಯದ ತತ್ವನೀತಿಗಳಿಗೆ ಯಾವತ್ತು ತೀಲಾ೦ಜಲಿಯನ್ನಿಡಲಿಲ್ಲ.

ದೇಶಕ್ಕಾಗಿ ದಿನ ದಲಿತರಿಗಾಗಿ ತಮ್ಮನ್ನು ತಾವೇ ಸಮರ್ಪಣೆ ಮಾಡಿಕೊ೦ಡರು ಇ೦ತಹ ಮಹಾನ್ ವ್ಯಕ್ತಿಯ ದಿನಾಚರಣೆಯನ್ನು ಆಚರಿಸಿದರೆ ಸಾಲದು ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎ೦ದು ಹೇಳಿದರು.

ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಸಿಬ್ಬ೦ದಿವರ್ಗದವರು ಹಾಗೂ ಬ೦ದಿಗಳು ಡಾ|| ಬಾಬಾಸಾಹೇಬರ ಭಾವಚಿತ್ರಕ್ಕೆ ಮೇಣಬತ್ತಿ ಬೆಳಗಿಸುವುದರ ಮೂಲಕ ಗೌರವನಮನಗಳನ್ನು ಸಲ್ಲಿಸಿದರು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ