ನ. 14ರಿಂದ 20ರ ವರೆಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರಿ ತಣ್ತೀಗಳ ಬಗೆಗೆ ಚಿಂತನೆ ನಡೆಸುವ ಕಾಲವಿದು. ಮೊಳ ಹಳ್ಳಿ ಶಿವರಾಯರು, ಪೆರಾಜೆ ಶ್ರೀನಿವಾಸ ರಾಯರು, ಜಿ.ಎಸ್.ಆಚಾರ್, ವಾರಣಾಶಿ ಸುಬ್ರಾಯ ಭಟ್, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಬಂಟ್ವಾಳ ನಾರಾಯಣ ನಾಯಕ್‌ರಂತಹ ನಡೆ-ನುಡಿಗಳಲ್ಲಿ ಸಹಕಾರಿಗಳಾಗಿದ್ದವರನ್ನು ಸ್ಮರಿಸಲಾಗುತ್ತಿದೆ.
ಪೆರಾಜೆ ಶ್ರೀನಿವಾಸ ರಾಯರು ಸಹಕಾರ ಕ್ಷೇತ್ರದಲ್ಲಿ ದಿಗ್ಗಜರೆನಿಸಿದ ಇತ್ತೀಚಿನವರು. ಇವರ ಇಳಿವಯಸ್ಸಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಕಾರ ರಂಗದ ಸಮಾರಂಭಗಳಲ್ಲಿ ಆಹ್ವಾನಿಸಿ ಗೌರವ ಸಲ್ಲಿಸುತ್ತಿದ್ದಾಗ “ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುರಿತು ನೀವುಗಳೆಲ್ಲ ಮೆಚ್ಚುಗೆ ಸೂಚಿಸುತ್ತೀರಿ. ಇದರಲ್ಲಿ ನನ್ನ ಪಾಲು ಏನೂ ಇಲ್ಲ. ಇದೆಲ್ಲ ಗುರುಗಳಾದ ಮೊಳಹಳ್ಳಿ ಶಿವರಾಯರಿಗೆ ಸಲ್ಲುತ್ತದೆ. ಅವರು ಶಾಲಾ ವಿದ್ಯಾರ್ಥಿ ಹಂತದಲ್ಲಿಯೇ ನಮಗೆ ಸಹಕಾರ ತಣ್ತೀವನ್ನು ತಿಳಿಸುವ ಆಂದೋಲನ ನಡೆಸಿದ್ದರು. ಹೀಗಾಗಿ ನಾನು ನನ್ನ ಯಥಾಶಕ್ತಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ವಿನೀತರಾಗಿ ನುಡಿಯುತ್ತಿದ್ದರು. ಶಿವರಾಯರು ವಿದ್ಯಾರ್ಥಿದೆಸೆಯಲ್ಲಿಯೇ ಸಹಕಾರ ತತ್ತವನ್ನು ಪ್ರಸಾರ ಮಾಡುತ್ತಿದ್ದುದು ಮಾತ್ರವಲ್ಲ, ತಾನೂ ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಿದವರಾಗಿದ್ದರು.
“ಮಕ್ಕಳೇ, ತಲೆ ಮೇಲೆ ಧರಿಸಿರುವ ಗಾಂಧಿ ಟೋಪಿಯಿಂದ ನಿಮಗೆ ಎಲ್ಲಿಲ್ಲದ ಗೌರವ ದೊರೆಯುತ್ತದೆ. ಏಕೆಂದರೆ ಅದಕ್ಕೆ ಪಾವಿತ್ರ್ಯವಿದೆ. ಆ ಮೌಲ್ಯವನ್ನು ನೀವು ತಲೆಯ ಮೇಲೆ ಧರಿಸಿರುವಿರಿ ಎನ್ನುವ ಎಚ್ಚರವಿರಲಿ. ಆ ಎಚ್ಚರವೇ ನಿಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿಸಿ ಒಳ್ಳೆಯ ಕೆಲಸವನ್ನು ಮಾಡಿಸುತ್ತದೆ. ಹಾಗೆಯೇ ಶುಭ್ರವಾದದ್ದು ಸಹಕಾರಿ ತಣ್ತೀ. ಅದನ್ನು ಮನಸ್ಸಲ್ಲಿಟ್ಟು ಸಹಕಾರಿ ಕೆಲಸವನ್ನು ಮಾಡುವಾಗ ಸೇವಾ ಮನೋಭಾವವು ತಾನಾ
ಗಿಯೇ ಜಾಗೃತವಾಗಬೇಕು’ ಎಂದು ಶಿವರಾಯರು ಹೇಳುತ್ತಿದ್ದರು.
1930ರಿಂದ 70ರ ದಶಕದವರೆಗೆ ಪುತ್ತೂರಿನಲ್ಲಿದ್ದ ಹಿರಿಯ ಸಾಹಿತಿ ಡಾ| ಶಿವರಾಮ ಕಾರಂತರು ಅಲ್ಲಿ ನಡೆಸಿದ ಚಟುವಟಿಕೆಗಳು ವ್ಯಾಪಕ. “ಆ ಪ್ರದೇಶದಲ್ಲಿ ನಾನೇನು ಮಾಡಿದ್ದರೂ ಅದು ಅವರ ಪ್ರೇರಣೆ ಮತ್ತು ನೆರವುಗಳಿಂದ’ ಎಂದು “ಸ್ಮತಿಪಟಲದಿಂದ’ ಕೃತಿಯಲ್ಲಿ ಡಾ|ಕಾರಂತರು ದಾಖಲಿಸಿದ್ದಾರೆ.