Breaking News
Home / ಜಿಲ್ಲೆ / ಬೀದರ್ / ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ: ಸಿಎಂ ಬೊಮ್ಮಾಯಿ

Spread the love

ಬೀದರ್: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣ ಮತ್ತು ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಮುಟ್ಟಿಸುತ್ತೇನೆ. ಅವರು ಏನು ಶಿಕ್ಷೆ ಕೊಡುತ್ತಾರೆ ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.

 

ಔರಾದ ಪಟ್ಟಣದಲ್ಲಿ ಮಂಗಳವಾರ ‘ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿಯಲ್ಲಿನ ಹಗರಣ ಸೇರಿ ಎಲ್ಲ ದಾಖಲೆಗಳನ್ನು ರಾಹುಲ್‌ಗೆ ಕೊಡಲಿದ್ದೇನೆ. ಅರ್ಜಿ ಹಾಕದೇ ಶಿಕ್ಷಕರ ನೇಮಕಾತಿ ನಡೆದಿದ್ದು, ಇದರಲ್ಲಿ ಎಷ್ಟು ಪರ್ಸಂಟೇಜ್ ಹೊಡೆದಿರಬಹುದು? ಇದು ಕಾಂಗ್ರೆಸ್ ಸರ್ಕಾರದ ಆಡಳಿತ. ಆದರೆ, ನಾವು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಉನ್ನತ ಅಧಿಕಾರಿಗಳು ಸೇರಿ ತಪ್ಪು ಮಾಡಿದ್ದವರನ್ನು ಯಾರಿಗೂ ಬಿಡಲಿಲ್ಲ. ಸಿದ್ದರಾಮಯ್ಯ ಕೇವಲ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೇಳಲು ರಾಹುಲ್ ಗಾಂಧಿಗೆ ಆತ್ಮಸಾಕ್ಷಿ ಬೇಕಲ್ಲವೇ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಯಾರ ಸರ್ಕಾರ ಇದೆ, ನಿರ್ಣಯ ತೆಗೆದುಕೊಂಡವರು ಯಾರು ಅರಿಯಬೇಕು. ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೀನ ದಲಿತರಿಗೆ ಶೂನ್ಯ ಕೊಡುಗೆ ನೀಡಿದೆ ಎಂದು ಹೇಳಿದರು.


Spread the love

About Laxminews 24x7

Check Also

ರಮ್ಯಾ ಜತೆ ರಕ್ಷಿತ್​​ ಶೆಟ್ಟಿ ಸಿನಿಮಾ ಮಾಡೋದು ಪಕ್ಕಾ.. ಹೇಗಿತ್ತು ಸಿಂಪಲ್​ ಸ್ಟಾರ್​​ ರಿಯಾಕ್ಷನ್..?​​

Spread the loveಸ್ಯಾಂಡಲ್​ವುಡ್​ ಪದ್ಮಾವತಿ ರಮ್ಯಾ ಕಂಬ್ಯಾಕ್​ಗಾಗಿ ಅದೇಷ್ಟೋ ಹೃದಯಗಳು ಕಾದು ಕುಂತಿವೆ. ಪೊಲಿಟಿಕಲ್ ಸಹವಾಸ ಸಾಕು, ಪ್ಲೀಸ್ ಸಿನಿಮಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ