ಜರಿ ಉದ್ಯಮದಲ್ಲಿ (Jari Business) ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಳಗಾವಿ ನಗರದ ನಿವಾಸಿ ಲೋಹಿತ್ ಮೋರಕರ್ ಎಂಬುವರು ಜರಿ ಉದ್ಯಮದಿಂದ (ಸೀರೆಗೆ ಬೇಕಾಗುವ ಕಚ್ಚಾ ವಸ್ತು ತಯಾರಿಸುವ ಘಟಕ) ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಈಮೂಲಕ ಸಂಕಷ್ಟಗಳ ಸಾಲೇ ಮುಂದೆ ಬಂದರೂ ಯಾವುದಕ್ಕೂ ಜಗ್ಗದೇ ಎದುರಿಸಿ ಗೆಲುವಿನ ಹಳಿ ತಲುಪಿದ್ದಾರೆ. ಕುಂದಾನಗರಿಯ ಉದ್ಯಮಿಯ ಸಾಹಸಗಾಥೆ ನೀವೇ .
ಸಂಕಷ್ಟಕ್ಕೆ ಸಿಲುಕಿದ್ರೂ ಧೈರ್ಯಗೆಡಲಿಲ್ಲ
ಇನ್ನೇನು ಉದ್ಯಮ ಪ್ರಾರಂಭಿಸಿ ವರ್ಷ ಕಳೆಯುವುದರಲ್ಲಿ ದೇಶಾದ್ಯಂತ ಕೊರೊನಾ ಹೆಚ್ಚಾಯಿತು. ಕೊರೊನಾ ತಡೆಗೆ ಎರಡು ಬಾರಿ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಲೋಹಿತ್ ಮೋರಕರ್ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಜರಿ ಘಟಕವನ್ನು ಕಾರ್ಮಿಕರಿಲ್ಲದೇ ಸ್ವತಃ ತಾವೇ ನಿರ್ವಹಿಸಲು ಮುಂದಾಗುತ್ತಾರೆ. ಮೊದಲು ಕಾರ್ಖಾನೆಯಲ್ಲಿ ಕಡಿಮೆ ಕೆಲಸಕ್ಕೆ ಇದ್ದ ಕಾರ್ಮಿಕರಿಂದ ಕಲಿತ ಕೆಲಸವನ್ನು ತನ್ನ ಕುಟುಂಬಸ್ಥರಿಗೆ ಕಲಿಸಿಕೊಡುತ್ತಾ, ತಮ್ಮ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಸದ್ಯ ಒಳ್ಳೆಯ ಲಾಭ ಪಡೆಯುತ್ತಿದ್ದಾರೆ.
ನೆರೆ ಹಾವಳಿಯ ಅವಾಂತರ
ಸ್ವಾವಲಂಬಿ ಬದುಕಿಗೆ ದಾರಿ ರಾಜ್ಯದಲ್ಲಿ ನಿರಂತರ ಮಳೆಗೆ 2019ರಲ್ಲಿ ನೆರೆ ಹಾವಳಿ ಸಂಭವಿಸಿತ್ತು. ಇದಾದ ಬಳಿಕ ವಕ್ಕರಿಸಿಕೊಂಡ ಕೊರೊನಾ ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಫ್ಯಾಕ್ಟರಿ ಸ್ಥಗಿತಗೊಳ್ಳುತ್ತದೆ. ಪರಿಣಾಮ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಇರುವ ಬಿಹಾರಿ ಕಾರ್ಮಿಕರು ತವರಿಗೆ ಹಿಂದಿರುಗುತ್ತಾರೆ.
Laxmi News 24×7