ಬಡವರು, ದಲಿತರಿಗೆ ಬಲ ಕೊಡಬೇಕೆಂಬ ಅಂಬೇಡ್ಕರರ ಕನಸನ್ನು ನನಸು ಮಾಡಲು ಜನಧನ, ಆಯುಷ್ಮಾನ್ ಭಾರತ, ಸ್ಟಾರ್ಟಪ್, ಮುದ್ರಾ ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ.
ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದವರಲ್ಲಿ ಶೇಕಡ 50 ಜನ ದಲಿತರು ಮತ್ತು ಹಿಂದುಳಿದವರೇ ಇದ್ದಾರೆ. ಕರ್ನಾಟಕದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ವರ್ಗ ಅಸಮಾನತೆ, ಜಾತಿ ಅಸಮಾನತೆ ಹಾಗೂ ಲಿಂಗ ಅಸಮಾನತೆಯನ್ನು ಜೀವಿತದುದ್ದಕ್ಕೂ ವಿರೋಧಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಮತ್ತು ಸಿದ್ಧಾಂತಗಳು ಭಾರತದ ನೆಲದಲ್ಲಿ ಆಳವಾಗಿ ಬೇರೂರಿವೆ. ಈ ಭರತ ಖಂಡಕ್ಕೆ ಸಂವಿಧಾನ ಎಂಬ ಕಾನೂನು ಚೌಕಟ್ಟು ಕೊಟ್ಟವರು ಅವರು.
ಭಾರತದ ಎಲ್ಲ ಧರ್ಮಗಳಿಗೂ ಹಿಂದುತ್ವವೇ ಬೇರು. ಹಾಗೆ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧರ ಆದರ್ಶಗಳು ಈ ನೆಲದ ಕಾನೂನಿಗೆ ಎಷ್ಟು ಅಗತ್ಯ ಎಂಬುದನ್ನು ಲಿಖಿತ ಸಂವಿಧಾನದಲ್ಲಿ ಶಾಂತಿ ಮಂತ್ರವನ್ನು ಬೋಧಿಸುವ ಮೂಲಕ ಅಂಬೇಡ್ಕರರು ತೋರಿಸಿಕೊಟ್ಟರು.
ಬಾಬಾ ಸಾಹೇಬರು ಈ ದೇಶ ಕಂಡ ಶ್ರೇಷ್ಠ ಚಿಂತಕರಲ್ಲೊಬ್ಬರು. ದಲಿತ-ದಮನಿತ-ಶ್ರಮಜೀವಿ ಸಮುದಾಯಗಳ ಪಾಲಿಗಂತೂ ಮಹಾನ್ ಚೇತನ. ಅಂಬೇಡ್ಕರರ ಹೃದಯದ ಬಡಿತದಲ್ಲಿದ್ದ ಸಿದ್ಧಾಂತ, ಆಶಯಗಳು ಹಾಗೂ ಅವರ ಚಿಂತನೆಗಳಲ್ಲಿದ್ದ ವೈಚಾರಿಕ ಶಕ್ತಿಯು ಭಾರತೀಯ ಜನತಾ ಪಕ್ಷದ ಸಿದ್ಧಾಂತವಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷಗಳ ಸುವರ್ಣ ಮಹೋತ್ಸವದ ಈ ವರ್ಷದಲ್ಲಿ ಅಂಬೇಡ್ಕರರ ಆಶಯಗಳನ್ನು ಈಡೇರಿಸುವತ್ತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಜ್ಜೆ ಹಾಕುತ್ತಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯವು ದೇಶದ ಒಂದು ಹೆಮ್ಮೆಯ ವಿಶ್ವವಿದ್ಯಾಲಯವಾಗಿದೆ.
ಹಿಂದೂ ಸಮಾಜದ ಪುನರ್ರಚನೆ ಹಾಗೂ ಸಶಕ್ತ ಸಮೃದ್ಧ ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಅಂಬೇಡ್ಕರ್ ಅವರ ಅವಿಸ್ಮರಣೀಯ ಸಾಧನೆ. ಹಾಗೆಯೇ ಅವರು ಕೇವಲ ರಾಜಕೀಯ ಮುಖಂಡರಾಗಿರದೇ ಭಾರತೀಯ ಲೋಕತಂತ್ರದ ಪ್ರವರ್ತಕ ಆಗಿದ್ದರೆಂದರೆ ಅತಿಶಯೋಕ್ತಿಯಾಗಲಾರದು. ಸಮಾಜ ಸುಧಾರಣೆ, ಆರ್ಥಿಕ ಸುಧಾರಣೆ, ಸಾಂಸ್ಕೃತಿಕ ಐಕ್ಯತೆ, ಸಂವಿಧಾನ ಹಾಗೂ ಸೈನಿಕ ಪ್ರಭುಶಕ್ತಿಯ ಮೂಲಕ ರಾಷ್ಟ್ರವನ್ನು ನಿರ್ವಿುಸಿದ್ದಾರೆ. ಅವರ ಪ್ರತಿಯೊಂದು ಚಿಂತನೆ ಹಾಗೂ ಕ್ರಿಯೆ ರಾಷ್ಟ್ರ ಹಿತವನ್ನು ಬಯಸುವ, ಸಾಧಿಸುವ, ಚಿಕಿತ್ಸಾತ್ಮಕವಾದಂತಹ ರಾಷ್ಟ್ರೀಯ ಚಿಂತನೆಯಾಗಿದೆ.
ಭಾರತದ ಸ್ಪಶ್ಯ- ಅಸ್ಪೃಯರನ್ನು ಏಕಕಾಲದಲ್ಲಿ ಎಚ್ಚರಿಸುವ ಮೂಲಕ ಹಿಂದೂ ಸಮಾಜದ ಪುನರ್ರಚನೆ ಹಾಗೂ ಹಿಂದೂ ರಾಷ್ಟ್ರೀಯತೆಯ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಬರೋಡಾದಲ್ಲಿ ಒಮ್ಮೆ ಪಾರ್ಸಿ ಹೋಟೆಲ್ಲಿಗೆ ಬಡಿಗೆಗಳನ್ನು ಹಿಡಿದು ಬಂದ ಯುವಕರು ‘ನೀನು ಯಾರು?’ ಎಂದು ಪ್ರಶ್ನಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ‘ನಾನೊಬ್ಬ ಹಿಂದು’ ಎಂಬುದಾಗಿತ್ತು. 1917 ರಿಂದ 1953ರ ಹಿಂದೂ ಕೋಡ್ಬಿಲ್ನವರೆಗೂ ಅಂಬೇಡ್ಕರ್ ಅವರು ಜಾತಿ ಜಾತಿಗಳಲ್ಲಿ ಛಿದ್ರವಾಗಿದ್ದ ಮೇಲು-ಕೀಳುಗಳಿಂದ ಪತನಗೊಂಡಿದ್ದ ಹಿಂದೂ ಸಮಾಜವನ್ನು ಪುನರ್ರಚಿಸುವ ಮೂಲಕ ರಾಷ್ಟ್ರವನ್ನು ಪುನರ್ನಿರ್ವಿುಸುವ ಸಾಹಸದ ಯಾತ್ರೆಯನ್ನು ಜ್ಞಾನ ಮತ್ತು ಕ್ರಿಯೆ ಎರಡೂ ನೆಲೆಗಳಲ್ಲಿ ಮಾಡಿದ್ದಾರೆ. ಅಸ್ಪೃಯತೆ, ಜಾತೀಯತೆ ನಾಶವಾದ ದಿನ ಹಿಂದೂ ಸಮಾಜ ಬಲಗೊಳ್ಳುತ್ತದೆ. ಹಿಂದೂ ಸಮಾಜ ಬಲಗೊಂಡಾಗ ರಾಷ್ಟ್ರಕ್ಕೆ ಮತ್ತು ರಾಷ್ಟ್ರೀಯತೆಗೆ ಬಲ ಬರುತ್ತದೆ ಎಂಬುದು ಅವರ ನಿಲುವಾಗಿತ್ತು.
ಅಂಬೇಡ್ಕರರು ಮತಾಂತರಗೊಳ್ಳುವ ಮೊದಲು ತಾನು ಜಗತ್ತು ಬಿಟ್ಟು ಹೋಗುವ ಮುಂಚಿತವಾಗಿ ತಮ್ಮ ಸಮುದಾಯದವರಿಗೆ ಒಂದು ನಿಶ್ಚಿತ ದಿಕ್ಕು ತೋರಿಸಬೇಕಾಗಿದೆ ಎಂದಿದ್ದರು. ಅದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸಹಾನುಭೂತಿ, ಏಕತೆ, ಸಮಾನತೆ ಸಾರ್ವಜನಿಕ ಗುರಿಗಳಲ್ಲಿ ಪ್ರತಿಬದ್ಧತೆ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ವ್ಯಾಖ್ಯಾನಿಸಿದ್ದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಅಂಬೇಡ್ಕರರ ಪಂಚಧಾಮಗಳನ್ನು ‘ಪಂಚತೀರ್ಥ’ ಎಂದು ಘೊಷಿಸಿ ಅಭಿವೃದ್ಧಿಪಡಿಸಿದೆ. ಅವರು ಹುಟ್ಟಿದ ಜಾಗ ಮಧ್ಯಪ್ರದೇಶದ ಮಹುವಾ, ಬ್ಯಾರಿಸ್ಟರ್ ಪದವಿ ಪಡೆಯುವ ವೇಳೆ ವಾಸವಿದ್ದ ಲಂಡನ್ ಮನೆಯನ್ನು ಖರೀದಿಸಿ ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ದೆಹಲಿಯ ಆಲಿಪುರ್ ರಸ್ತೆಯಲ್ಲಿ ಅವರು ಸಂವಿಧಾನಕರ್ತವಾಗಿ ವಾಸವಿದ್ದ ಮನೆಯನ್ನು ಸ್ಮಾರಕ ಮಾಡಲಾಗಿದೆ. ಕರ್ಮಭೂಮಿ ನಾಗಪುರ ಮತ್ತು ಅಂತ್ಯಸಂಸ್ಕಾರ ನಡೆದ ಮುಂಬೈ- ಈ ಪಂಚಸ್ಥಳಗಳನ್ನು ಪಂಚಧಾಮವಾಗಿ ಅಭಿವೃದ್ಧಿಪಡಿಸಲಾಗಿದೆ.
ಬಡವರು, ದಲಿತರಿಗೆ ಬಲ ಕೊಡಬೇಕೆಂಬ ಅಂಬೇಡ್ಕರರ ಕನಸನ್ನು ನನಸು ಮಾಡಲು ಜನಧನ, ಆಯುಷ್ಮಾನ್ ಭಾರತ, ಸ್ಟಾರ್ಟಪ್, ಮುದ್ರಾ ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ. ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದವರಲ್ಲಿ ಶೇ.50 ಜನ ದಲಿತರು ಮತ್ತು ಹಿಂದುಳಿದವರೇ ಇದ್ದಾರೆ. ಕರ್ನಾಟಕದಲ್ಲಿ ಅಂಬೇಡ್ಕರ್ ಅವರು ಬಂದು ಹೋದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶೋಷಿತ ವರ್ಗದವರ ಪೋಷಣೆ ಸರ್ಕಾರದ ಆದ್ಯ ಕರ್ತವ್ಯ. ಆ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಸರ್ಕಾರ ನಡೆದುಕೊಳ್ಳುತ್ತಿದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮತ್ತು ಅಧಿಕಾರ ವಂಶಪಾರಂಪರ್ಯದಿಂದ ಬರುವುದು ಶ್ರೇಷ್ಠವಲ್ಲ. ಜನರ ಮಧ್ಯದಿಂದ ರಾಜಕೀಯ ಬೆಳವಣಿಗೆಯಾಗಬೇಕು. ಇದು ಅಂಬೇಡ್ಕರ್ ಅವರ ಆಶಯವೂ ಕೂಡಾ. ಆ ಆಶಯವನ್ನು ಪೂರ್ಣಗೊಳಿಸುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪೂರ್ಣಗೊಳಿಸುತ್ತಿದೆ.
(ಲೇಖಕರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)
ಬಡವರು, ದಲಿತರಿಗೆ ಬಲ ಕೊಡಬೇಕೆಂಬ ಅಂಬೇಡ್ಕರರ ಕನಸನ್ನು ನನಸು ಮಾಡಲು ಜನಧನ, ಆಯುಷ್ಮಾನ್ ಭಾರತ, ಸ್ಟಾರ್ಟಪ್, ಮುದ್ರಾ ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ. ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದವರಲ್ಲಿ ಶೇಕಡ 50 ಜನ ದಲಿತರು ಮತ್ತು ಹಿಂದುಳಿದವರೇ ಇದ್ದಾರೆ. ಕರ್ನಾಟಕದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
(ಲೇಖಕರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)